More

    ಸೋಂಕಿತರ ಆರೈಕೆ ಸಮರ್ಪಕವಾಗಿರಲಿ

    ಗಜೇಂದ್ರಗಡ: ಕಂಟೇನ್ಮೆಂಟ್ ಜೋನ್​ಗಳಲ್ಲಿ ಸ್ಯಾನಿಟೈಸ್, ಕೋವಿಡ್ ಪಾಸಿಟಿವ್ ರೋಗಿಗಳ ಆರೈಕೆ ಹಾಗೂ ಉಟೋಪಚಾರದ ವ್ಯವಸ್ಥೆ ಸರಿಯಾಗಿ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗೆ ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ ಸೂಚಿಸಿದರು.

    ಪಟ್ಟಣದ ತಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 9 ಪಶು ಆಸ್ಪತ್ರೆಗಳಿವೆ. 6ರಲ್ಲಿ ವೈದ್ಯರಿಲ್ಲದೇ ಜಾನುವಾರುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಗಂಟಲ ಬೇನೆ, ಕಾಲು ಬೇನೆ ಸಹಿತ ಅನಾರೋಗ್ಯಕ್ಕೆ ತುತ್ತಾಗುವ ಜಾನುವಾರು, ಇತರ ಸಾಕುಪ್ರಾಣಿಗಳ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಅಲೆದಾಡುವ ಸ್ಥಿತಿ ತಲೆದೋರಿದೆ. ಕೂಡಲೇ ಪಶು ವೈದ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

    ಆ. 15ರ ವಿಜಯವಾಣಿ ಪತ್ರಿಕೆಯ ವರದಿ ಪ್ರಸ್ತಾಪಿಸಿದ ಹೂಗಾರ, ಯೂರಿಯಾ ಗೊಬ್ಬರವನ್ನು ಕೆಲ ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ತಾಪಂ ಅಧ್ಯಕ್ಷೆ ಜಯಶ್ರೀ ಪಾಟೀಲ ಮಾತನಾಡಿ, ಹಾಲಕೇರಿಯಲ್ಲಿರುವ ಆರೋಗ್ಯ ಕೇಂದ್ರದ ಸುತ್ತ ಮದ್ಯದ ಬಾಟಲಿಗಳು ಬಿದ್ದಿವೆ. ಕುಡುಕರ ಹಾವಳಿ ತಪ್ಪಿಸಲು ಆರೋಗ್ಯ ಕೇಂದ್ರದ ಸುತ್ತ ಕಾಂಪೌಂಡ್ ನಿರ್ವಿುಸಬೇಕು ಎಂದರು.

    ತಾಪಂ ಸಭೆಗೆ ಗೈರಾದ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಒತ್ತಾಯಿಸಿದರು. ತಾಪಂ ಇಒ ಸಂತೋಷ ಪಾಟೀಲ, ತಾಪಂ ಸದಸ್ಯರಾದ ರತ್ನವ್ವ ಪೂಜಾರ, ಹುತ್ತಪ್ಪ ಮಾದರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts