More

    ಸೋಂಕಿತರಿಗೆ ಮೂಲಸೌಲಭ್ಯದ ವ್ಯವಸ್ಥೆ

    ನರಗುಂದ: ತಾಲೂಕಿನ ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಸೋಮವಾರ ಅಧಿಕಾರಿಗಳ ಸಮೇತ ಭೇಟಿ ನೀಡಿ ಮೂಲ ಸೌಲಭ್ಯ ಪರಿಶೀಲಿಸಿದರು.

    ‘ಕ್ವಾರಂಟೈನ್ ಕೇಂದ್ರದ ಸೋಂಕಿತರಿಗೆ ಕಳಪೆ ಆಹಾರ ಪೂರೈಕೆ ಆರೋಪ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಆ.3 ರಂದು ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಜನಪ್ರತಿನಿಧಿಗಳು, ಸೋಂಕಿತರಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಕ್ವಾರಂಟೈನ್​ಗೆ ಒಳಗಾದ ಸೋಂಕಿತರಿಗೆ ಪ್ರತಿನಿತ್ಯ ಬಿಸಿ ನೀರು ವಿತರಿಸಬೇಕು. ಶೌಚಗೃಹ ಹಾಗೂ ಸ್ನಾನಗೃಹಗಳನ್ನು ಶುಚಿಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಬೆನಕನಕೊಪ್ಪ ಪಿಡಿಒ ಎಸ್.ಎನ್. ಹರನಟ್ಟಿ ಹಾಗೂ ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

    ತಹಸೀಲ್ದಾರ್ ಎ.ಎಚ್.ಮಹೇಂದ್ರ ಅವರು ಸೋಂಕಿತರಿಗೆ ಬೇಕಾದ ಬಿಸಿ ನೀರಿಗಾಗಿ 51 ಸಾವಿರ ರೂಪಾಯಿ ಮೌಲ್ಯದ 3 ಸೋಲಾರ್​ಗಳನ್ನು ಅಳವಡಿಸಿದ್ದಾರೆ. ಇದೀಗ ಮಳೆಗಾಲ ಆಗಿರುವುದರಿಂದ ಸೂರ್ಯನ ತಾಪ ಇಲ್ಲದಿದ್ದಾಗ ವಿದ್ಯುತ್ ಮೂಲಕವೂ ಬಿಸಿ ನೀರನ್ನು ಕಾಯಿಸಿಕೊಳ್ಳಬಹುದು. ಅಲ್ಲದೆ, ಸೋಂಕಿತರ ಅನುಕೂಲಕ್ಕಾಗಿ 20 ಲೀಟರ್ ಸಾಮರ್ಥ್ಯದ 8 ಹಾಟ್​ವಾಟರ್ ಕ್ಯಾನ್​ಗಳನ್ನು ಖರೀಸಿದಿಸಿದ್ದು, ಸೋಮವಾರ ಮಧ್ಯಾಹ್ನ ಕ್ವಾರಂಟೈನ್ ಕೇಂದ್ರದಲ್ಲಿಯೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.

    ಈ ವೇಳೆ ಮಾತನಾಡಿದ ಅವರು, ‘ಸೋಂಕಿತರಿಗೆ ನೀಡುವ ಆಹಾರದ ಗುಣಮಟ್ಟ ಚೆನ್ನಾಗಿದೆ. ಆದರೆ, ವಿನಾಕಾರಣ ಕೆಲವೊಬ್ಬರು ರಾತ್ರಿ ವೇಳೆ ತಮಗೆ ಚಪಾತಿ ಕೊಡಲಿಲ್ಲ ಅನ್ನುವ ಕಾರಣಕ್ಕೆ ಈ ರೀತಿಯ ಆರೋಪ ಮಾಡಿದ್ದಾರೆ. ನಿತ್ಯ ಮೆನು ಚಾರ್ಟ್ ಪ್ರಕಾರವೇ ಆಹಾರ ನೀಡಲಾಗುತ್ತಿದೆ. ಬಿಸಿ ನೀರಿಗಾಗಿ ಸೋಲಾರ್​ಗಳನ್ನು ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇನ್ನುಳಿದಂತೆ ಶೌಚಗೃಹ, ಸ್ನಾನಗೃಹಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಹೊಸ ಬಾಗಿಲುಗಳನ್ನು ಅಳವಡಿಸಲಾಗುತ್ತದೆ’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts