More

    ಜಾತ್ರೆ ಸುಗಮವಾಗಿ ನಡೆಯಲು ಜನರ ಸಹಕಾರ ಅಗತ್ಯ

    ಮುದಗಲ್: ತೊಂಡಿಹಾಳದ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ದೇವದಾಸಿ ಪದ್ಧತಿ, ಪ್ರಾಣಿ ಬಲಿ ಸೇರಿ ಇತರ ಮೌಢ್ಯಗಳನ್ನು ಆಚರಿಸಬಾರದು ಎಂದು ಲಿಂಗಸುಗೂರು ತಹಸೀಲ್ದಾರ್ ಶಂಶಾಲಂ ಹೇಳಿದರು.

    ತೊಂಡಿಹಾಳ ಸರ್ಕಾರಿ ಶಾಲೆ ಆವರಣದಲ್ಲಿ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸಾರಿಗೆ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಹಾಗೂ ಸಂಚಾರ ದಟ್ಟಣೆ ಆಗದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಜಾತ್ರೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ನಾಗರಿಕರ ಸಹಕಾರ ಅವಶ್ಯ ಎಂದರು.

    ತಾಪಂ ಇಒ ಅಮರೇಶ ಯಾದವ್ ಮಾತನಾಡಿ, ಕುಡಿವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಗ್ರಾಪಂಗೆ ಸೂಚನೆ ನೀಡಲಾಗಿದೆ ಎಂದರು. ಮುದಗಲ್ ಪಿಎಸ್‌ಐ ವೆಂಕಟೇಶ ಮಾತನಾಡಿ, ದೇವರ ಹೆಸರಲ್ಲಿ ಮೂಢನಂಬಿಕೆ ಮತ್ತು ಅನಿಷ್ಠ ಆಚರಣೆಗಳನ್ನು ಆಚರಿಸಿ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಕೋರಿದರು. ಅಬಕಾರಿ ಅಧಿಕಾರಿ ಹುಸೇನ್ ಸಾಬ್, ಪಿಡಿಒಗಳಾದ ಪ್ರೇಮಾ ಪವಾರ್, ಪ್ರವೀಣ ಪಾಟೀಲ್, ಗ್ರಾಮದ ಪ್ರಮುಖರಾದ ಹುಲ್ಲಪ್ಪ, ಬೈಲಪ್ಪ, ದೇವಪ್ಪ, ಪರಶುರಾಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts