More

    ಸೈಬರ್ ವಂಚನೆ ತಡೆಗೆ ಬೇಕು ಸಹಕಾರ

    ಚಿತ್ರದುರ್ಗ: ಸೈಬರ್ ಅಪರಾಧಗಳೆಡೆ ನಾಗರಿಕರಲ್ಲಿ ಅರಿವು ಮೂಡಿಸುವಂತೆ ಪ್ರಾಚಾರ‌್ಯ ಡಾ.ಪಿ.ಬಿ.ಭರತ್, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್‌ಎಜ್ಯುಕೇಷನ್- ಸ್ಟೂಡೆಂಟ್ಸ್ ಚಾಪ್ಟರ್ ಹಾಗೂ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಸೈಬರ್ ಸೆಕ್ಯೂರಿಟಿ ಫಾರ್ ಲೈಫ್’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ಈಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೈಬರ್ ಅಪರಾಧಗಳು ಹಾಗೂ ಸೈಬರ್ ವಂಚಕರ ಕುರಿತಂತೆ ಪಾಲಕರು ಹಾಗೂ ಜನರಲ್ಲಿ ಜಾಗೃತಿ ಮೂಡಿಸ ಬೇಕು. ಸೈಬರ್ ವಂಚನೆಗೆ ಒಳಗಾದವರು ಕೂಡಲೇ ಸೈಬರ್ ಕ್ರೈಂ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ವಂಚಕರ ಪತ್ತೆ ಸುಲಭವಾಗಲಿದೆ ಎಂದರು.
    ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಪೋರಾಳ್ ನಾಗರಾಜ್ ಮಾತನಾಡಿ, ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೈಬರ್ ಅಪರಾಧ ನಿಯಂತ್ರಣಕ್ಕೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
    ಸಂಪನ್ಮೂಲ ವ್ಯಕ್ತಿ ಶಿವಮೊಗ್ಗ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಕಾಲೇಜಿನ ಇನ್‌ಫಾರ‌್ಮೇಶನ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಎನ್.ಸಿ.ರುದ್ರೇಶ್ ಉಪನ್ಯಾಸ ನೀಡಿದರು.
    ಗಣಿತ ವಿಭಾಗದ ಮುಖ್ಯಸ್ಥ ಡಾ.ಎಚ್.ಜೆ.ಲೋಕೇಶ್, ಐಎಸ್‌ಟಿಇ ಸಂಚಾಲಕ ಪ್ರೊ.ವಿ.ಎಂ.ವಿನಾಯಕ, ಪ್ರೊ.ಆರ್.ಮೊನಿಷಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts