More

    ಸೈಕಲ್‌ನಲ್ಲೇ ಚಾರ್‌ಧಾಮ್ ಸುತ್ತಿದ ಕಲಬುರಗಿ ಯುವಕ

    ಕೃಷ್ಣ ಕುಲಕರ್ಣಿ ಕಲಬುರಗಿ
    ಜೀವನದಲ್ಲೇ ಅತ್ಯಂತ ಕಠಿಣ ಯಾತ್ರಾವೆಂದರೆ ಅದು ಚಾರ್‌ಧಾಮ್. ಎಲ್ಲ ಸೌಕರ್ಯಗಳಿದ್ದರೂ ಈ ನಾಲ್ಕು ಕ್ಷೇತ್ರಗಳ ದರ್ಶನ ಪಡೆಯುವುದು ಕಷ್ಟ. ಅಂಥದರಲ್ಲಿ 22 ವಯಸ್ಸಿನ ಇಲ್ಲಿಯ ಯುವಕನೊಬ್ಬ ಸೈಕಲ್‌ನಲ್ಲಿ ಚಾರ್‌ಧಾಮ್ ದರ್ಶನ ಪಡೆಯುವ ಸಾಹಸ ಮಾಡಿ ಗಮನ ಸೆಳೆದಿದ್ದಾರೆ.

    ಕಲಬುರಗಿಯ ರೇವಣಸಿದ್ಧೇಶ್ವರ ಕಾಲನಿಯ ಪ್ರಶಾಂತ ರಾಮಶೆಟ್ಟಿ ಎಂಬ ಯುವಕ `ಯಾದಗಾರ್ ಯಾತ್ರೆ’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಜೂನ್ 19ರಂದು ಶ್ರೀ ಶರಣಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸೈಕಲ್‌ನಲ್ಲಿ ಚಾರ್‌ಧಾಮ್ ಯಾತ್ರೆ ಆರಂಭಿಸಿದ್ದರು. 2500ಕ್ಕೂ ಅಧಿಕ ಕಿಮೀ ಸೈಕಲ್‌ನಲ್ಲಿ ಸಾಗಿದ್ದಾರೆ. ಭಕ್ತಿ ಹಾಗೂ ಏನಾದರೂ ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಯಾತ್ರೆ ಯಶಸ್ವಿಗೊಳಿಸಿದ್ದಾರೆ.

    ಮಹಾರಾಷ್ಟç, ಮಧ್ಯಪ್ರದೇಶ, ಉತ್ತರಾಖಂಡ ರಾಜ್ಯಗಳನ್ನು ಸಂದರ್ಶಿಸಿ ಕೇದಾರನಾಥ, ಯಮುನೋತ್ರಿ, ಗಂಗೋತ್ರಿ ಹಾಗೂ ಬದ್ರಿನಾಥನ ದರ್ಶನ ಪಡೆದಿದ್ದಾರೆ. ಅಲ್ಲದೆ ದಾರಿ ಮಧ್ಯದ ಜ್ಯೋತಿರ್ಲಿಂಗಳಾದ ಘೃಷ್ಣೇಶ್ವರ, ಓಂಕಾರೇಶ್ವರ, ಉಜ್ಜಯಿನಿ ಮಹಾಕಾಳೇಶ್ವರರ ಆಶೀರ್ವಾದ ಪಡೆದಿದ್ದಾರೆ. ಜು.31ರಂದು ನಸುಕಿನ ಜಾವವೇ ಕೇದಾರನಾಥನ ದರ್ಶನ ಪಡೆದರೆ, ಬಳಿಕ ಆ.4ರಂದು ಬದ್ರಿನಾಥನ ದರ್ಶನ ಪಡೆದು ಯಾತ್ರೆ ಪೂರ್ಣಗೊಳಿಸಿದ್ದಾರೆ.

    ಕೇದಾರನಾಥದಲ್ಲಿ ಶ್ರೀ ಕೇದಾರನಾಥೇಶ್ವರನ ದರ್ಶನ ಪಡೆದು, ಬಳಿಕ ಬಿಜೆಪಿ ಯುವ ನಾಯಕ ಹಾಗೂ ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್ ಅವರ ಅಭ್ಯುದಯಕ್ಕಾಗಿ ಪ್ರಶಾಂತ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಂದು ಪಾಟೀಲ್ ಅವರ ಪೋಟೊವಿರುವ ಬ್ಯಾನರ್ ಹಿಡಿದು, ಜನರ ಅಚ್ಚು-ಮೆಚ್ಚಿನ ನಾಯಕ ಚಂದು ಪಾಟೀಲ್ ಅವರು ಭವಿಷ್ಯದಲ್ಲಿ ಶಾಸಕರಾಗಲಿ, ಹೆಚ್ಚಿನ ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

    45 ದಿನದಲ್ಲಿ ಮುಗಿದ ಟೂರ್: ಪ್ರಶಾಂತ ಅವರು ಯಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ನಿತ್ಯ 60-70 ಕಿಮೀ ಸಂಚರಿಸಿ ಗುರಿ ಮುಟ್ಟಬೇಕು ಅಂದುಕೊAಡಿದ್ದರು. ಆದರೆ ಹೈವೇ ಹಾಗೂ ಅನುಕೂಲಕರ ವಾತಾವರಣದಿಂದ ನಿತ್ಯವೂ 100 ಕಿಮೀ ಸೈಕಲ್ ತುಳಿದಿದ್ದಾರೆ. ಆ.15ರಂದು ಕೇದಾರನಾಥ ತಲುಪಿ, ದೇಗುಲದ ಆವರಣದಲ್ಲಿ ರಾಷ್ಟç ಹಾಗೂ ಕನ್ನಡ ಧ್ವಜ ಹಾರಿಸಬೇಕು ಅಂದುಕೊAಡಿದ್ದರು. ಆದರೆ ಜು.31ರಂದು ಕೇದಾರ ತಲುಪಿ ದರ್ಶನ ಪಡೆದಿದ್ದಾರೆ. ಇದರಿಂದ 15 ದಿನಕ್ಕೂ ಮೊದಲೇ ಚಾರ್‌ಧಾಮ್ ತಲುಪಿದಂತಾಗಿದೆ. ಹೀಗಾಗಿ 2 ತಿಂಗಳ ಯಾತ್ರೆ ಕೇವಲ 45 ದಿನಗಳಲ್ಲಿಯೇ ಮುಗಿಸಿದ್ದಾರೆ.

    22 ಕಿಮೀ ಸೈಕಲ್ ಹೊತ್ತು ಬೆಟ್ಟ ಹತ್ತಿದೆ: ಯಮುನೋತ್ರಿ ಹಾಗೂ ಗಂಗೋತ್ರಿ ಕ್ಷೇತ್ರಗಳಿಗೆ ಸೈಕಲ್ ಮೂಲಕವೇ ಸಾಗಿದ್ದೇನೆ. ಆದರೆ ಕೇದಾರನಾಥನ ದರ್ಶನ ಪಡೆಯಬೇಕಾದರೆ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಸಾಗಬೇಕು. ಬೆಟ್ಟದ ಹಾದಿಯಲ್ಲಿ ಸೈಕಲ್ ಹೋಗಲ್ಲ, ಹೀಗಾಗಿ ಎಲ್ಲರೂ ಸೈಕಲ್ ಬಿಟ್ಟು ನಡೆದುಕೊಂಡು ಹೋಗಿ ಎಂದು ಹೇಳಿದ್ರು. ಆದರೆ ನನಗೆ ಸೈಕಲ್‌ನೊಂದಿಗೆ ದೇಗುಲ ದರ್ಶನ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಸುಮಾರು 16 ಕೆಜಿ ಭಾರದ ಸೈಕಲ್ ಹಾಗೂ 15 ಕೆಜಿ ಬ್ಯಾಗ್‌ನೊಂದಿಗೆ ಕೇದಾರ ಧಾಮದ ದಾರಿಯಲ್ಲಿ ನಡೆದುಕೊಂಡು ಹೋಗಿದ್ದೇನೆ. ಯಾತ್ರೆಯಲ್ಲಿ ಸೈಕಲ್ ನನ್ನನ್ನು ಹೊತ್ತು ಸಾಗಿದರೆ, ಕೇದಾರನಾಥನ ದರ್ಶನಕ್ಕೆ ಸೈಕಲ್ ಅನ್ನು ನಾನು ಹೊತ್ತು ನಡೆದದ್ದು ಒಂದು ರೀತಿಯಲ್ಲಿ ಕೃತಜ್ಞತಾ ಭಾವನೆ ಮೂಡಿತು ಎಂದು ಪ್ರಶಾಂತ ಯಾತ್ರೆ ನೆನಪು ಹಂಚಿಕೊAಡರು.

    ಚಾರಧಾಮ್ ಯಾತ್ರಾ `ಯಾದಗಾರ್’ಆಗಿತ್ತು. ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಿ ಹಿಂದು ಧರ್ಮದ ನಾಲ್ಕು ಧಾಮಗಳ ದರ್ಶನ ಪಡೆದಿದ್ದೇನೆ. ಯಮುನೋತ್ರಿ ಹೋಗುವಾಗ ಕಣ್ಮುಂದೆಯೇ ಗುಡ್ಡ ಕುಸಿಯಿತು. ಮಳೆಯಲ್ಲಿ ಗುಹೆ, ಗುಡ್ಡಗಳಲ್ಲಿಯೇ ಕಾಲ ಕಳೆದಿದ್ದೇನೆ. ರಸ್ತೆ ಪಕ್ಕದಲ್ಲೂ ಮಲಗಿದ್ದೇನೆ. ಕೇದಾರನಾಥ ಹಾಗೂ ಬದ್ರಿನಾಥನ ಆಶೀರ್ವಾದದಿಂದಲೇ ಯಾತ್ರೆ ಯಶಸ್ವಿಯಾಗಿದೆ. ಯಾತ್ರೆಗೆ ಒಟ್ಟು 30 ಸಾವಿರ ರೂ.ಖರ್ಚಾಗಿದೆ.
    | ಪ್ರಶಾಂತ ರಾಮಶೆಟ್ಟಿ,
    ಚಾರ್‌ಧಾಮ್ ಯಾತ್ರಿಗ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts