More

    ಸೇವೆ ಕಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ

    ಲಕ್ಷ್ಮೇಶ್ವರ: ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ, ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಕೆಲಕಾಲ ಧರಣಿ ಮಾಡಿ ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಅವರಿಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ನಾಗೂರ, ಉಪಾಧ್ಯಕ್ಷೆ ಶ್ವೇತಾಕುಮಾರಿ ಬಿ.ಸಿ, ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ, ಕೃಷ್ಣ ಕುಲಕರ್ಣಿ, ವಿರೂಪಾಕ್ಷ ಪಾಟೀಲ, ಫಕೀರೇಶ ಜಂತ್ಲಿ, ಈಶ್ವರ ಹಿರೇಮಠ, ಮಹೇಶ ಗಡ್ಡದೇವರಮಠ, ವೀರನಗೌಡ ರಾಮನಗೌಡ್ರ, ರವಿ ಕೊಪ್ಪದ, ಸಂಜೀವ ಸೋಗಿನ, ನವೀನಕುಮಾರಿ, ಮಂಜುಳಾ ಎನ್.ಎಸ್, ಅರುಣ ಡಿ, ಇತರರಿದ್ದರು.

    ಪ್ರತಿಭಟನೆ ಬೆಂಬಲಿಸಿ ತಾಲೂಕು ಕರವೇ ಕಾರ್ಯಕರ್ತರು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಲೋಕೇಶ ಸುತಾರ, ಶಂಕರಗೌಡ ಪಾಟೀಲ ಇತರರಿದ್ದರು.

    ಮುಂಡರಗಿಯಲ್ಲಿ ಮುಂದುವರಿದ ಮುಷ್ಕರ

    ಮುಂಡರಗಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರು ತಹಸೀಲ್ದಾರ್ ಕಾರ್ಯಾಲಯ ಮುಂದೆ ಕೈಗೊಂಡ ಮುಷ್ಕರ 2ನೇ ದಿನವಾದ ಶನಿವಾರವೂ ಮುಂದುವರಿಯಿತು. ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಪ್ರಲ್ಹಾದ ಹೊಸಮನಿ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ರೆಹಮಾನ್​ಸಾಬ್ ಮಲ್ಲನಕೇರಿ, ಸಂತೋಷ ಹಿರೇಮನಿ ಹಾಗೂ ನಾಗರಾಜ ಹಾನಗಲ್ಲ, ಕೊಟ್ರಗೌಡ ಪಾಟೀಲ, ಮಂಜಪ್ಪ ದಂಡಿನ ಮುಷ್ಕರ ಬೆಂಬಲಿಸಿ, ನೌಕರರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಡಾ. ಶಂಕರ ಭಾವಿಮನಿ, ಡಾ. ವಿದ್ಯಾ ಗದ್ದಿ, ಡಾ. ನಂದಾ ಶಾಸ್ತ್ರಿ, ಬೀಬಿಜಾನ್ ಸುಂಕದ, ಉಮೇಶ ದೇವರಮನಿ, ಹನುಮಾಕ್ಷಿ ಕಗ್ಗಲ್, ಪ್ರೇಮಾ ರೆಡ್ಡಿ, ಶೋಭಾ ಸವಣೂರ, ಸುಭಾಸ ಅಂಗಡಿ ಇತರರಿದ್ದರು.

    ಗದುಗಿನಲ್ಲಿ 10 ದಿನ ಪೂರೈಸಿದ ಧರಣಿ

    ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಗದಗ ಜಿಲ್ಲಾಡಳಿತ ಭವನ ಎದುರು (ಸೆ. 24ರಿಂದ) ನಡೆಸುತ್ತಿರುವ ಪ್ರತಿಭಟನೆ ಶನಿವಾರ 10ನೇ ದಿನ ಪೂರೈಸಿತು. ಇಲ್ಲಿವರೆಗೆ ಆಸ್ಪತ್ರೆಯಲ್ಲಿ ಕೈಗೆ ಪಟ್ಟಿ ಕಟ್ಟಿಕೊಂಡು ಸೇವೆ ಮಾಡುತ್ತಿದ್ದ ಗುತ್ತಿಗೆ, ಹೊರಗುತ್ತಿಗೆ ನೌಕರರು ಶುಕ್ರವಾರದಿಂದ ಜಿಲ್ಲಾಡಳಿತ ಭವನದ ಎದುರು ಧರಣಿ ಆರಂಭಿಸಿದ್ದಾರೆ. ಕರೊನಾ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದರೂ ಸರ್ಕಾರ ಸೌಲಭ್ಯ ಒದಗಿಸಲು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಸಂಘದ ಅಧ್ಯಕ್ಷ ಡಾ. ಜಯಕುಮಾರ ಬ್ಯಾಳಿ ಆರೋಪಿಸಿದರು. ಎಚ್.ಬಿ. ಗದಿಗೆಣ್ಣವರ, ವಿಠಲ ನಾಯಕ, ವಿನಾಯಕ ಅಗಸಿಮನಿ, ಪ್ರವೀಣ ಮಾನ್ವಿ, ಬಿ.ಎನ್. ಶಿವಳ್ಳಿ, ಗಂಗಾ ಸಜ್ಜನರ, ಬಸವರಾಜ ಚಲವಾದಿ, ಸುಮಾ ಬಂಡೆಪ್ಪವರ, ಪ್ರವೀಣಕುಮಾರ, ರವಿಕುಮಾರ, ಸುನೀತಾ ಉಮಚಗಿ, ರವಿ ಕಪಗಾವಿ, ವೀರೇಶ ಮುದಕವಿ, ಲಕ್ಷಿ್ಮ ಡಂಬಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts