More

    ಸೇವಾ ಕಾರ್ಯದೊಂದಿಗೆ ರೆಡ್‌ಕ್ರಾಸ್ ದಿನಾಚರಣೆ

    ದಾವಣಗೆರೆ: ರೆಡ್‌ಕ್ರಾಸ್ ಸಂಸ್ಥಾಪಕ ಸರ್ ಜಾನ್ ಹೆನ್ರಿ ಡುನಾಂಟ್ ಇವರ ಜನ್ಮದಿನದ ಸ್ಮರಣಾರ್ಥ ವಿಶ್ವ ರೆಡ್‌ಕ್ರಾಸ್ ದಿನವನ್ನು ಹರಿಹರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

    ಯುವ ವಯಸ್ಕರಲ್ಲಿ ಒತ್ತಡ ಮತ್ತು ಖಿನ್ನತೆ ಕುರಿತು ಜೆಜೆಎಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ವೈದ್ಯೆ ಡಾ.ಎಚ್.ಹೇಮಾವತಿ ಹಾಗೂ ರಕ್ತದಾನ ಮಹತ್ವ ಹಾಗೂ ಜಾಗೃತಿ ಕುರಿತು ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಜ್ಯೋತಿ ಮಾತನಾಡಿದರು.
    ನಂತರ ರಕ್ತದಾನ, ಹಿಮೋಗ್ಲೋಬಿನ್ ತಪಾಸಣೆ, ದಾವಣಗೆರೆ ನೇತ್ರಾಲಯ ಹಾಗೂ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ ಜಂಟಿ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರ, ಓರೆವಾ ಆರ್.ಎಸ್. – ಶ್ರವಣ ಆರೋಗ್ಯ ಚಿಕಿತ್ಸಾಲಯದಿಂದ ಉಚಿತ ಶ್ರವಣ ಆರೋಗ್ಯ ಶಿಬಿರಗಳು ನಡೆದವು.
    ಹರಿಹರದ ಪೌರ ಸೇವಾ ಸಮಿತಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಎಸ್.ಪ್ರಸನ್ನ ಕುಮಾರ್, ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯಡಾ. ಜಿ.ಬಿ. ಗಂಗಾಧರಪ್ಪ ಭಾಗವಹಿಸಿದ್ದರು.
    54 ಮಂದಿ ಶ್ರವಣ ತಪಾಸಣೆ ಮಾಡಲಾಗಿ ಆರು ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಸೂಚಿಸಲಾಯಿತು. 72 ಜನ ನೇತ್ರ ತಪಾಸಣೆ ಲಾಭ ಪಡೆದಿದ್ದು, ಐವರಿಗೆ ಕ್ಯಾಟರ್ ಸರ್ಜರಿ ಅವಶ್ಯಕತೆ ಇದ್ದರಿಂದ ಅಗರವಾಲ್ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಹಿಮೋಗ್ಲೋಬಿನ್ ತಪಾಸಣೆ ನಡೆಸಲಾಯಿತು. ಇಬ್ಬರು ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. ರೆಡ್‌ಕ್ರಾಸ್ ನಿರ್ದೇಶಕರಾದ ಡಿ.ಎನ್.ಶಿವಾನಂದ, ಎ.ಜೆ. ರವಿಕುಮಾರ್, ಕಚೇರಿ ವ್ಯವಸ್ಥಾಪಕ ರವೀಂದ್ರನಾಥ್ ಆರ್ ಧಾವಸ್ಕರ್, ಸಂಯೋಜಕ ಎನ್.ಜಿ.ಶಿವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts