More

    ಸೆರಾಲಾಜಿ ಲ್ಯಾಬ್ ನಿರ್ಮಾಣಕ್ಕೆ ಭೂಮಿಪೂಜೆ

    ಎಚ್.ಡಿ. ಕೋಟೆ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 30 ಲಕ್ಷ ರೂ. ವೆಚ್ಚದ ಸೆರಾಲಾಜಿ ಲ್ಯಾಬ್, 13 ಲಕ್ಷ ರೂ. ವೆಚ್ಚದಲ್ಲಿ ರೋಗಿಗಳ ನಿರೀಕ್ಷಣ ಕೊಠಡಿ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು.

    ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಜನರು ಮೈಸೂರಿಗೆ ತೆರಳಬೇಕಾಗಿತ್ತು. ಈಗ ಸ್ಥಳೀಯವಾಗಿ ವರದಿ ಸಿಗುವುದರಿಂದ ಅಲೆದಾಡುವ ಸಮಸ್ಯೆ ಇರುವುದಿಲ್ಲ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ವಿಶೇಷವಾಗಿ ತಾಲೂಕಿನಲ್ಲಿ ಲ್ಯಾಬ್ ನಿರ್ಮಾಣವಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಆಗುತ್ತಿದ್ದ ಅನಾಹುತಗಳಿಗೆ, ಹಲವು ರೋಗಗಳ ಪರೀಕ್ಷೆಗಳನ್ನು ಮಾಡಿಸಲು ಮೈಸೂರಿನ ಲ್ಯಾಬ್ಗಳಿಗೆ ತೆರಳಬೇಕಿತ್ತು. ಇದೀಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಬ್ ನಿರ್ಮಾಣವಾಗುತ್ತಿರುವುದು ತಾಲೂಕಿನ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

    ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ ಮಾತನಾಡಿ, ರಾಜ್ಯದಲ್ಲೇ ತಾಲೂಕಿಗೆ ಪ್ರಥಮವಾಗಿ ಸೆರಾಲಜಿ ಲ್ಯಾಬ್ ಆರಂಭವಾಗುತ್ತಿದೆ. ರೋಗಿಗಳು ಮೈಸೂರಿಗೆ ಅಲೆದಾಡುವುದು ತಪ್ಪಲಿದೆ ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಪುರಸಭೆ ಅಧ್ಯಕ್ಷೆ ಅನಿತಾ ನಿಂಗನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ದರ್ಶಿನಿ, ಎಚ್.ಸಿ.ನರಸಿಂಹಮೂರ್ತಿ, ಪ್ರೇಮ್‌ಸಾಗರ್, ಮಧು, ಆಸಿಫ್, ಮುಖಂಡರಾದ ಸೌಮ್ಯಾ, ಯಶ್ವಂತ್, ಪರಶಿವಮೂರ್ತಿ, ದಿನೇಶ್, ಅಶೋಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts