More

    ಸೂಪರ್ ಸ್ಪೆಷಾಲಿಟಿಯಲ್ಲಿ ಒ.ಟಿ.

    ಮರಿದೇವ ಹೂಗಾರ ಹುಬ್ಬಳ್ಳಿ

    ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಸೋಂಕಿತರಿಗೆ ಕರೊನಾ ಮಾತ್ರವಲ್ಲ; ಬೇರೆ ಕಾಯಿಲೆಯೂ ಇದ್ದಲ್ಲಿ ಉಪಚಾರದ ವಿಧಾನವೂ ಬೇರೆ ಅಥವಾ ಸಂಕೀರ್ಣವಾಗಿರಬಹುದು. ಒಂದುವೇಳೆ ಶಸ್ತ್ರ ಚಿಕಿತ್ಸೆಯ ಅನಿವಾರ್ಯತೆ ಇದ್ದರೆ ಹೇಗೆ ಮಾಡಬೇಕು ಎಂಬ ಪ್ರಶ್ನೆ ಇಲ್ಲಿನ ಕಿಮ್್ಸ ಆಡಳಿತ ಮಂಡಳಿಗೆ ಎದುರಾಗಿದೆ.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸಾ ವಾರ್ಡ್​ಗಳಿವೆ. ಉಳಿದ ಕಾಯಿಲೆಗಳ ಚಿಕಿತ್ಸೆ ವ್ಯವಸ್ಥೆಗಳು ಬೇರೆ ಕಟ್ಟಡದಲ್ಲಿವೆ. ಹಾಗಾಗಿಯೇ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ ಆರಂಭಿಸುವ ಮೂಲಕ ಒಂದಿಷ್ಟು ಸಮಸ್ಯೆ ಪರಿಹರಿಸಿಕೊಳ್ಳಲು ಆಡಳಿತ ಮಂಡಳಿ ಚಿಂತಿಸಿದೆ.

    ಕರೊನಾ ಹೊಸ ಕಾಯಿಲೆಯಾಗಿರುವುದರಿಂದ ಸೋಂಕಿತ ವ್ಯಕ್ತಿಗೆ ಇಂಥದ್ದೇ ರೋಗ ಲಕ್ಷಣಗಳು ಎಂದಿರುವುದಿಲ್ಲ. ಬೇರೆ ಬೇರೆ ವ್ಯಕ್ತಿಯಲ್ಲಿಯ ರೋಗ ಲಕ್ಷಣ ಬೇರೆ ಬೇರೆಯಾಗಿರಬಹುದು. ಆದರೆ, ಸೋಂಕುಳ್ಳ ವ್ಯಕ್ತಿಗೆ ಹೃದ್ರೋಗ, ಕಣ್ಣು, ಕಿವಿ, ಮೂಗು, ಹೆರಿಗೆ, ಎಲುಬು ಮತ್ತು ಕೀಲು, ಅಪೆಂಡಿಕ್ಸ್ ಸೇರಿ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂದಾಗ ಸಹಜವಾಗಿ ವೈದ್ಯ ಸಮೂಹದ ಒತ್ತಡಕ್ಕೆ ಸಿಲುಕುತ್ತದೆ. ಕರೊನಾ ಪೀಡಿತ ವ್ಯಕ್ತಿಯನ್ನು ಬೇರೆ ಚಿಕಿತ್ಸೆಗಾಗಿ ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಆಗುವುದಿಲ್ಲ. ಇದ್ದಲ್ಲಿಯೇ ಶಸ್ತ್ರ ಚಿಕಿತ್ಸೆಗೆ ಒಳಪಡಿಸಬೇಕೆಂದರೆ ಆಪರೇಶನ ಥಿಯೇಟರ್ ಸಹಿತ ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಬೇಕಾಗುತ್ತದೆ. ಇವೆಲ್ಲವನ್ನೂ ಸೀಮಿತ ಅವಧಿಯಲ್ಲಿ ಮಾಡಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಹೊಸ ಕಟ್ಟಡದಲ್ಲೇ ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆ (ಸರ್ಜಿಕಲ್ ಆಂಡ್ ಅಲೈಡ್ ಬ್ರಾಂಚ್) ಅರಂಭಿಸಲು ತೀರ್ವನಿಸಲಾಗಿದೆ.

    ಕೆಲವು ವಾರದ ಹಿಂದೆ ಬೇರೆ ಕಾಯಿಲೆ ಇದ್ದ ವ್ಯಕ್ತಿ ಕಿಮ್ಸ್​ಗೆ ಬಂದಿದ್ದರು. ಅವರನ್ನು ದಾಖಲಿಸಿಕೊಂಡು, ಅಗತ್ಯ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆಗ ಅವರಿಗೆ ಕರೊನಾ ಸೋಂಕಿರುವುದು ಗೊತ್ತಿರಲಿಲ್ಲ. ಸೋಂಕು ಇದೆ ಎಂಬುದು ಗೊತ್ತಾದಾಗ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಸೇರಿ ಎಲ್ಲರೂ ಹೌಹಾರಿದ್ದರು.

    ಮತ್ತೊಮ್ಮೆ ಅಂಥ ಸಂದರ್ಭ ಬಾರದಿರಲಿ ಎಂಬ ಮುಂಜಾಗ್ರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಶಸ್ತ್ರ ಚಿಕಿತ್ಸಾ ವಿಭಾಗ ಆರಂಭಿಸುವುದರಿಂದ ಸೋಂಕಿತ ವ್ಯಕ್ತಿಗೆ ಅಗತ್ಯಬಿದ್ದರೆ ಅಲ್ಲಿಯೇ(ಪಿಎಂಎಸ್​ಎಸ್​ವೈ) ಚಿಕಿತ್ಸೆ ನೀಡಲಾಗುತ್ತದೆ.

    ಹೆರಿಗೆಗೆ ಸಿದ್ಧತೆ: ಸೋಂಕಿತ ಗರ್ಭಿಣಿಯೊಬ್ಬರಿಗೆ ನವಮಾಸ ತುಂಬುತ್ತಿದ್ದು, ಯಾವಾಗ ಬೇಕಾದರೂ ಹೆರಿಗೆ ಬೇನೆ ಕಾಣಿಸಿಕೊಳ್ಳಬಹುದು. ಹಾಗಾಗಿ, ಹೆರಿಗೆ ಮಾಡಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಸೋಂಕಿತರಿಗೆ ಬೇರೆ ರೋಗ ಇದ್ದು, ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಸೂಪರ್ ಸ್ಪೆಷಾಲಿಟಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯದಲ್ಲೇ ಕಾರ್ಯಾರಂಭ ಮಾಡಲಾಗುವುದು.
    ಡಾ. ಅರುಣಕುಮಾರ ಚವ್ಹಾಣ, ಕಿಮ್್ಸ ಪ್ರಭಾರ ವೈದ್ಯಕೀಯ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts