More

    ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗ ನಿವಾರಣೆ

    ಬೆಳಗಾವಿ: ಕುಷ್ಠರೋಗ ನಿವಾರಣೆ ಮಾಡಬಹುದು. ರೋಗ ಪೀಡಿತರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ಹೇಳಿದರು. ನಗರದ ಜಿಲ್ಲಾ ಕುಷ್ಠರೋಗ ನಿಯಂತ್ರಣ ವಿಭಾಗದ ಆವರಣದಲ್ಲಿ ಸೋಮವಾರ ಜರುಗಿದ ಸ್ಪರ್ಶ ಕುಷ್ಠರೋಗ ತಡೆ ಜಾಗೃತಿ ಆಂದೋಲನ ಬಿತ್ತಿ ಪತ್ರಗಳು, ಕರಪತ್ರಗಳು, ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿ, ಕುಷ್ಠರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ಬಹು ಔಷಧ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಎಂದರು. ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಚಾಂದಿನಿ ಜಿ. ದೇವಡಿ ಮಾತನಾಡಿ, ಕುಷ್ಠರೋಗ ನಿವಾರಿಸಲು ಹೋರಾಡೋಣ.

    ಸಾರ್ವಜನಿಕರಲ್ಲಿ ಕುಷ್ಠರೋಗದ ಬಗ್ಗೆ ಇರುವ ಅವೈಜ್ಞಾನಿಕ ನಂಬಿಕೆ ಹೋಗಲಾಡಿಸಿ ಈ ಕಾಯಿಲೆಯ ಇತರ ಕಾಯಿಲೆಗಳಂತೆ ಒಂದು ಸಾಮಾನ್ಯ ಕಾಯಿಲೆಯಾಗಿದೆ. ಬಹು ಔಷಧ ಚಿಕಿತ್ಸೆ ವಿಧಾನದ ಮೂಲಕ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದು ಸಮುದಾಯದಲ್ಲಿ ಅರಿವು ಮೂಡಿಸಲು ಈ ಪಾಕ್ಷಿಕದ ಉದ್ದೇಶ ಎಂದರು. ಬೆಳಗಾವಿ ಟಿ.ಎಚ್.ಒ ಡಾ.ಶಿವಾನಂದ ಮಾಸ್ತಿಹೊಳಿ, ಡಾ.ಬಿ.ಎನ್ ತುಕ್ಕಾರ, ಡಾ.ಎಂ.ಎಸ್. ಪಲ್ಲೇದ, ಡಾ. ಅನಿಲ ಕೊರಬು, ಶಿವಾಜಿ ಮಾಳಗನ್ನವರ, ಡಾ.ಪ್ರಕಾಶ ವಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts