More

    ಕುಷ್ಟರೋಗ ನಿರ್ಮೂಲನೆಗೆ ಮುಂದಾಗಿ

    ಹೂವಿನಹಿಪ್ಪರಗಿ: ಕುಷ್ಟರೋಗದ ಬಗ್ಗೆ ಜನರಲ್ಲಿ ಕೆಲ ತಪ್ಪು ಅಭಿಪ್ರಾಯಗಳಿದ್ದು ಪಾಪ, ಶಾಪದಿಂದ ಈ ರೋಗ ಹರಡುವುದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹೂವಿನಹಿಪ್ಪರಗಿ ಬಿ ವಲಯದ ಸಮುದಾಯ ಆರೋಗ್ಯ ಅಧಿಕಾರಿ ಹೀನಾಕೌಸರ ಪಟೇಲ್ ಹೇಳಿದರು.

    ಸಮೀಪದ ಅಗಸಬಾಳ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

    ಕುಷ್ಟರೋಗ ಇತರೆ ಕಾಯಿಲೆಗಳಂತೆ ಒಂದು ಸಾಮಾನ್ಯ ಕಾಯಿಲೆ. ಈ ರೋಗವು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆ ಇದಕ್ಕೆ ಕಾರಣ ಮೈಕೋ ಬ್ಯಾಕ್ಟೀರಿಯಂಲೆಪ್ರೆ ಎಂಬ ಒಂದು ಸೂಕ್ಷ್ಮ ರೋಗಾಣುದಿಂದ ಬರುತ್ತದೆ. ಕುಷ್ಟರೋಗ ಆನುವಂಶಿಕ ರೋಗವಲ್ಲ. ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಚರ್ಮದ ಮೇಲೆ ತಿಳಿ-ಬಿಳಿ ತ್ರಾಮ ವರ್ಣದ ಮಚ್ಚೆಗಳಿಗೆ ಸ್ಪರ್ಶ ಜ್ಞಾನವಿರುವುದಿಲ್ಲ. ಎಂಡಿಟಿ ಚಿಕಿತ್ಸೆಯಿಂದ ಕುಷ್ಟರೋಗ ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಎಂಡಿಟಿ ಚಿಕಿತ್ಸೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತದೆ. ಕತ್ತಿ ಪಕ್ಕದಲ್ಲಿ, ಮೊಣಕೈ ಹಾಗೂ ಮೂಣಕಾಲುಗಳ ಹಿಂಭಾಗದಲ್ಲಿ ನರಗಳ ಊತ ಹಾಗೂ ನೋವು, ನಿಮ್ಮ ಮೈಮೇಲೆ ಯಾವುದೇ ರೀತಿಯ ಮಚ್ಚೆಗಳಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೂಳ್ಳಿ ಎಂದರು.

    ಕುಷ್ಟರೋಗದಿಂದ ಗುಣ ಹೂಂದಿದವರು ಇತರರಂತೆ ಸಾಮಾನ್ಯ ಜೀವನ ನಡೆಸಬಹುದು. ಚಿಕಿತ್ಸೆಗೆ ನಿರಾಕರಿಸಿದ ರೋಗಿಗಳ ಮನವೂಲಿಸಿ ಚಿಕಿತ್ಸೆ ಪಡೆಯಲು ಪ್ರೇರೇಪಿಸಿ. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕುಷ್ಟರೋಗದ ಬಗ್ಗೆ ತಿಳಿವಳಿಕೆ ನೀಡಿ ಅವರು ಇದರ ಬಗ್ಗೆ ಜನರಿಗೆ ತಿಳಿಸಲು ಕಲಿಸಿ ಎಂದರು.

    ಮುಖ್ಯಶಿಕ್ಷಕ ಮಲ್ಲಿಕಾರ್ಜುನ ರಾಜನಾಳ, ರುಕ್ಮಿಣಿ ಹೆಳವರ, ವೈ.ಆರ್. ಇಂಗಳೇಶ್ವರ, ಎಸ್.ಎಸ್. ಮಸೂತಿ, ವಿಜಯಲಕ್ಷ್ಮೀ ಮಸಬಿನಾಳ, ಕಾವೇರಿ ದಿಡ್ಡಿಮನಿ, ಆಶಾ ಕಾರ್ಯಕರ್ತೆ ಅಂಬಿಕಾ ಕುಂಬಾರ, ಬಸಮ್ಮ ಬಿರಾದಾರ ಹಾಗೂ ಶಾಲಾ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts