More

    ಸುರಿವ ಮಳೆಯಲ್ಲೂ ನಾಗರ ಪಂಚಮಿ ಸಡಗರ; ಶ್ರದ್ಧಾಭಕ್ತಿಯಿಂದ ನಾಗಪ್ಪನ ಪೂಜೆ

    ಆನಂದಪುರ: ಸುತ್ತಮುತ್ತಲ ಹಳ್ಳಿಗಳಲ್ಲಿ ಸುರಿವ ಮಳೆಯ ನಡುವೆಯೂ ಗ್ರಾಮಸ್ಥರು ನಾಗರಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಶ್ರದ್ಧಾ-ಭಕ್ತಿಯಿಂದ ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ, ತನಿ ಎರೆದರು.
    ಬಸವನ ಬೀದಿಯ ಕೊನೆಯಲ್ಲಿರುವ ನಾಗರ ಬನ, ರಂಗನಾಥ ರಸ್ತೆಯ ಕೊನೆಯಲ್ಲಿರುವ ನಾಗರಕಟ್ಟೆ, ಹಳೇ ಸಂತೆ ಮಾರ್ಕೆಟ್ ರಸ್ತೆಯ ಕೊನೆಯಲ್ಲಿರುವ ಅರಳಿಕಟ್ಟೆ, ರಾಮ ಮಂದಿರ ಸಮೀಪದ ಅರಳಿಕಟ್ಟೆಯ ನಾಗರ ವಿಗ್ರಹ, ಗಾಣಿಗನ ಕೆರೆ ದಡದ ಸಮೀಪ ಇರುವ ಅರಳಿಕಟ್ಟೆ, ಬಳ್ಳೀಬೈಲು ರಸ್ತೆಯ ತಿರುವಿನಲ್ಲಿರುವ ನಾಗರಕಟ್ಟೆ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗಾಣಿಗನ ಕೆರೆ ಸಮೀಪ ಇರುವ ಅರಳಿಕಟ್ಟೆ, ಜೇಡಿಸರ ಗ್ರಾಮದಲ್ಲಿರುವ ನಾಗದೇವತಾ ಆಲಯ, ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ನಾಗರಕಲ್ಲಿಗೆ ಪೂಜೆ ಸಲ್ಲಿಸಿದರು.
    ನೀರಿನಿಂದ ನಾಗರಕಲ್ಲು ತೊಳೆದು ಶುದ್ಧಗೊಳಿಸಿ, ಹಾಲು-ಮೊಸರು, ತುಪ್ಪ, ಪಂಚಾಮೃತಗಳಿಂದ ಅಭಿಷೇಕ ಮಾಡಿ ತನಿ ಎರೆಯುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಹಾಲು, ಅನ್ನದ ಚರು ಮತ್ತು ಚಪ್ಪೆ ಕಡುಬು, ಉಂಡೆಗಳನ್ನು ನೈವೇದ್ಯ ಮಾಡಿ ನಾಗಪ್ಪನಿಗೆ ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts