More

    ಸುರಕ್ಷಾ ಪರಿಕರಗಳು, ವಿಮೆ ಒದಗಿಸಿ ; ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ನೌಕರರ ಪಟ್ಟು

    ಚಿಕ್ಕಬಳ್ಳಾಪುರ : ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರಿಯರಿಗೆ ಸುರಕ್ಷಾ ಪರಿಕರಗಳು, ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಒತ್ತಾಯಿಸಿದೆ.

    ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಸೂಚನೆ ಮೇರೆಗೆ ದೇಶದಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಈ ಮೂಲಕ ನೌಕರರು ಅನುಭವಿಸುತ್ತಿರುವ ಸವಾಲು, ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.

    ಕರೊನಾ ನಿಯಂತ್ರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಾಗೃತಿ, ಸಮೀಕ್ಷೆ ಸೇರಿ ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಅಸುರಕ್ಷಿತ ವಾತಾವರಣದ ಅರಿವಿದ್ದರೂ ಸುರಕ್ಷತಾ ಪರಿಕರಗಳನ್ನು ವಿತರಿಸಿಲ್ಲ. ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮೊಬೈಲ್ ಒದಗಿಸದೇ ನೈಟ್‌ವರ್ಕ್ ಸಮಸ್ಯೆಯನ್ನು ಪರಿಗಣಿಸದೇ ಪೌಷ್ಠಿಕಾಂಶ ಪದಾರ್ಥಗಳ ವಿತರಣೆಗೆ ಪೋಷಣ್ ಟ್ರಾಕರ್ ಅಪ್ಲಿಕೇಶನ್‌ನಲ್ಲಿ ಅಪ್‌ಡೇಟ್ ಮಾಡಲು ತಿಳಿಸಲಾಗಿದೆ. ಇದರಿಂದ ನೌಕರರ ಯಾವುದೇ ದೋಷವಿಲ್ಲದಿದ್ದರೂ ವೇತನ ಕಡಿತದ ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪೋಷಕಾಂಶ ತೋಟಗಳ ನಿರ್ಮಾಣಕ್ಕೆ ಒತ್ತಡ, ಐಸಿಡಿಡಿಎಸ್ ಯೋಜನೆ ದುರ್ಬಲ, ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಶಾಲಾ ಪೂರ್ವ ಇಲ್ಲವೇ ಶಿಶುವಿಹಾರ ಕೇಂದ್ರಗಳಿಗೆ ಸೀಮಿತಗೊಳಿಸುವ ಮೂಲಕ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಘದ ಕಾರ್ಯದರ್ಶಿ ಕೆ.ರತ್ನಮ್ಮ, ಪಿ.ಎನ್.ಮುನಿರತ್ನಮ್ಮ, ಪದಾಧಿಕಾರಿಗಳಾದ ಕೆ.ಗೀತಾ, ನಂದಿನಿ, ಸುಜಾತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts