More

    ಸುರಕ್ಷತಾ ಸಾಮಗ್ರಿ ನೀಡಲು ಆಗ್ರಹ

    ನಗರದಲ್ಲಿ ಸಿಐಟಿಯು ಪ್ರತಿಭಟನೆ

    • ಮೈಸೂರು: ಕೋವಿಡ್-19 ರೋಗ ತಡೆಗೆ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ, ಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
      ಶಸ್ತ್ರಚಿಕಿತ್ಸಕರು, ವೈದ್ಯರು, ಶುಶ್ರೂಷಕರು, ಆಸ್ಪತ್ರೆಯ ಸಿಬ್ಬಂದಿ, ಪೌರಕಾರ್ಮಿಕರೂ ಕರೊನಾ ಸೋಂಕಿತರಾಗಿದ್ದು, ಇದರಿಂದ ಅನೇಕ ಆಸ್ಪತ್ರೆಗಳು ಮುಚ್ಚಿವೆ. ಯೋಜನಾ ಕಾರ್ಮಿಕರು ಸ್ಥಿತಿಗತಿ ಕೂಡ ಹೀನಾಯವಾಗಿದೆ. ಅಂದಾಜು 10 ಲಕ್ಷ ಆಶಾ ಕಾರ್ಯಕರ್ತೆಯರು, 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆಗೆ ಹಾಗೂ ರೋಗಿಗಳು, ಶಂಕಿತರ ಉಸ್ತುವಾರಿಗೆ ಕಳುಹಿಸುತ್ತಿರುವುದು ಆಘಾತಕಾರಿ ವಿಷಯ. ದೇಶದ ವಿವಿಧ ಭಾಗದಲ್ಲಿ ಇವರಿಗೆ ಸೋಂಕು ತಗುಲಿದೆ. ಕೆಲವರು ಮೃತಪಟ್ಟಿದ್ದಾರೆ. ಇವರ ಮೇಲೆ ಹಲ್ಲೆಗಳೂ ನಡೆದಿವೆ. ಔಷಧ ಸಿಂಪಡಿಸುವಾಗ ಪೌರಕಾರ್ಮಿಕರು ನಿಧನರಾಗಿದ್ದಾರೆ. ಆದರೆ, ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವ ಗುತ್ತಿಗೆ ಸಿಬ್ಬಂದಿಗೆ ವೇತನ, ಗೌರವಧನ ಸರಿಯಾಗಿ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
      ಬೇಡಿಕೆಗಳೇನು?:
      ಕಂಟೇನ್ಮೆಂಟ್, ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಸುರಕ್ಷತೆಗಾಗಿ ಪಿಪಿಇ ಕಿಟ್ ವಿತರಿಸಬೇಕು. ಅವರಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. 50 ಲಕ್ಷ ರೂ. ವಿಮೆಯನ್ನು ಇಡೀ ಕುಟುಂಬದ ಸದಸ್ಯರಿಗೂ ವಿಸ್ತರಣೆ ಮಾಡಬೇಕು. ಎನ್‌ಎಚ್‌ಎಂ ಗುತ್ತಿಗೆ, ಸ್ಕೀಮ್ ನೌಕರರಿಗೆ ಹೆಚ್ಚುವರಿಯಾಗಿ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ, ಉಚಿತವಾಗಿ ಪಡಿತರ ನೀಡಬೇಕು. ಸೋಂಕಿತ ಸಿಬ್ಬಂದಿಗೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ 7,500 ರೂ. ನೀಡಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಜಿಡಿಪಿಯಲ್ಲಿ ಶೇ.5ರಷ್ಟು ಹಣ ಮೀಸಲಿಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಖಾಸಗೀಕರಣವನ್ನು ನಿಲ್ಲಿಸಬೇಕು. ಮೃತ ಆಶಾ ಕಾರ್ಯಕರ್ತೆ ಸಾಕಮ್ಮ ಅವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
      ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಸಂಘಟನೆಯ ಮುಖಂಡರಾದ ಬಸವರಾಜು, ಲಾ.ಜಗನ್ನಾಥ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts