More

    ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಲಿ

    ಇಟಗಿ: ಯುವ ಜನತೆ ದೇಶೀಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆರೋಗ್ಯಯುತ ಶರೀರ ಸಂಪತ್ತನ್ನು ಉಳಿಸಿಕೊಂಡು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದರು.

    ಸಮೀಪದ ಗಂದಿಗವಾಡ ಗ್ರಾಮದ ಗ್ರಾಮದೇವಿ ದೇವಸ್ಥಾನದ ಹತ್ತಿರ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಲಾಗಿದ್ದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಟಾಟಿಸಿ ಮಾತನಾಡಿದರು. ಜಿಲ್ಲೆಯಲ್ಲೇ ಖಾನಾಪುರ ತಾಲೂಕಿನಲ್ಲಿ ವಿಶೇಷ ದೈಹಿಕ ಸಾಮರ್ಥ್ಯ ಮತ್ತು ಕ್ರೀಡಾ-ಕೌಶಲ ಹೊಂದಿದ ಅನೇಕ ಕ್ರೀಡಾಪಟುಗಳಿದ್ದು ಅವರಿಗೆ ಪ್ರೋತ್ಸಾಹಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುವೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಗಂದಿಗವಾಡ ಬಸವೇಶ್ವರ ಸಹಕಾರಿ ಸೊಸೈಟಿ ಕಾರ್ಯದರ್ಶಿ ಮಹಾಂತೇಶ ಕಮತಗಿ ಮಾತನಾಡಿ, ಗ್ರಾಮದಲ್ಲಿ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವುದರಿಂದ ಯುವಕರು, ಗ್ರಾಮಸ್ಥರಲ್ಲಿ ಚೈತನ್ಯ ಮೂಡುತ್ತಿದೆ ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಜಿಪಂ ಮಾಜಿ ಸದಸ್ಯ ಜ್ಯೋತಿಬಾ ರೆಹಮಾನಿ, ಬಿಜೆಪಿ ಯುವ ಮಖಂಡ ಜ್ಯೋತಿಬಾ ಭರಮಪ್ಪನವರ, ಲಕ್ಷ್ಮೀಶ ಕುರೇರ, ಮಾರುತಿ ಟಕ್ಕೇಕರ, ವೀರಭದ್ರಯ್ಯ ಚಿಕ್ಕಮಠ, ಬಸವರಾಜ ಹಿಟ್ಟಿನ, ವಿಠ್ಠಲ ಹಿಂಡಲಕರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts