More

    ಸಿಸಿ ಕ್ಯಾಮರಾ ಅಳವಡಿಕೆಯಿಂದ ಅಪರಾಧಕ್ಕೆ ತಡೆ

    ಯಲ್ಲಾಪುರ: ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯುವಲ್ಲಿ ಆಡಳಿತ ಮಂಡಳಿಯ ಪ್ರಮುಖರ ಪ್ರಯತ್ನ ಅಗತ್ಯವಾಗಿದೆ ಎಂದು ಸಿಪಿಐ ಸುರೇಶ ಯಳ್ಳೂರ ಹೇಳಿದರು.

    ಅವರು ಪಟ್ಟಣದ ತಾ.ಪಂ ಸಭಾಭವನದಲ್ಲಿ ಮಂಗಳವಾರ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ದೇವಸ್ಥಾನಗಳಲ್ಲಿ 4-5 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇದರಿಂದ ಅಪರಾಧ ಚಟುವಟಿಕೆಗಳು ನಡೆದರೆ ತಕ್ಷಣ ಪತ್ತೆ ಹಚ್ಚಲು ಸಾಧ್ಯ. ದೇವಸ್ಥಾನದಲ್ಲಿ ಪೂಜಾರಿಗಳನ್ನು ನೇಮಿಸುವಾಗ ಸಚ್ಚಾರಿತ್ರ್ಯ ಹೊಂದಿದವರನ್ನೇ ಆಯ್ಕೆ ಮಾಡಬೇಕು. ವಾರಕ್ಕೊಮ್ಮೆ ಕಾಣಿಕೆ ಹುಂಡಿಯನ್ನು ತೆರೆದು, ಸಂಗ್ರಹವಾದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಆಡಳಿತ ಮಂಡಳಿಯವರು ದೇವಸ್ಥಾನದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಬಗೆಗೂ ನಿಗಾ ವಹಿಸಬೇಕು ಎಂದರು.

    ಭರತನಹಳ್ಳಿಯ ಭ್ರಮರಾಂಬಾ ದೇವಸ್ಥಾನದ ಅಧ್ಯಕ್ಷ ಹೇರಂಬ ಹೆಗಡೆ ಮಾತನಾಡಿ, ಭರತನಹಳ್ಳಿಯ ದರ್ಗಾದಲ್ಲಿ ಹೊರಗಿನಿಂದ ಬರುವ ಕೆಲವರು ರಾತ್ರಿ ಸಮಯ ಅಲ್ಲೇ ಉಳಿದು, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗೌಜು-ಗದ್ದಲ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕೆಂದು ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ ಸುರೇಶ ಯಳ್ಳೂರ, ಈ ವಿಷಯ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಬೀಟ್ ಪೊಲೀಸರಿಗೆ ಸೂಚನೆ ನೀಡಲಾಗುವುದು. ಸದ್ಯದಲ್ಲೇ ಸಾರ್ವಜನಿಕರು ಹಾಗೂ ದರ್ಗಾ ಕಮಿಟಿಯ ಸಭೆ ಕರೆದು ರ್ಚಚಿಸಲಾಗುವುದೆಂದರು.

    ಪಿಎಸ್​ಐ ಭೀಮಸಿಂಗ್ ಲಮಾಣಿ, ಡಿ.ಶಂಕರ ಭಟ್ಟ, ಆರ್. ಎನ್. ಭಟ್ಟ, ಮಹೇಶ ನಾಯ್ಕ, ಸುಬ್ರಾಯ ಭಟ್ಟ, ಗೋಪಾಲಕೃಷ್ಣ ಕೊಂಬೆ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರಮುಖರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts