More

    ಸಿಬಿಐನಿಂದ ಪ್ರತಿವಾದ ಇಂದು

    ಧಾರವಾಡ: ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಇಲ್ಲಿನ ಹೈಕೋರ್ಟ್ ಪೀಠ ಗುರುವಾರಕ್ಕೆ ಮುಂದೂಡಿದೆ.

    ಕಳೆದ ಬಾರಿಯ ವಿಚಾರಣೆ ವೇಳೆ

    ಸಿಬಿಐ ವಕೀಲರು ಜಾಮೀನು ಅರ್ಜಿಗೆ ತಕರಾರು ಸಲ್ಲಿಸಿ, ವಾದ ಮಂಡಿಸಿದ್ದರು. ಹೆಚ್ಚಿನ ವಿಚಾರಣೆ ಬಯಸಿದ್ದ ಹೈಕೋರ್ಟ್ ಪೀಠ, ವಿಚಾರಣೆಯನ್ನು ಜ. 20ಕ್ಕೆ ಮುಂದೂಡಿತ್ತು.

    ವಿಚಾರಣೆ ಬುಧವಾರ ಸಂಜೆ 4ರವರೆಗೂ ನಡೆಯಿತು. ವಿನಯ ಕುಲಕರ್ಣಿ ಪರ ಶಶಿಕಿರಣ ಶೆಟ್ಟಿ ಹಾಗೂ ಬಾಹುಬಲಿ ಧನವಾಡೆ ವಾದ ಮಂಡಿಸಿದರು. ಸಿಬಿಐ ಪರ ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಎಸ್.ವಿ. ರಾಜು ಪ್ರತಿವಾದ ಮಂಡಿಸಿದರು. ಸಿಬಿಐ ವಕೀಲರ ಪ್ರತಿವಾದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿ ಆದೇಶಿಸಿತು.

    ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಂಚು ಮತ್ತು ಸಾಕ್ಷಿ ನಾಶದ ಆರೋಪದ ಮೇಲೆ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು 2020ರ ನ. 5ರಂದು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಆರೋಪದ ಮೇಲೆ ವಿನಯ ಕುಲಕರ್ಣಿ ಮಾವ ಚಂದ್ರಶೇಖರ ಇಂಡಿಯನ್ನೂ ಬಂಧಿಸಲಾಗಿದೆ. ವಿನಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಇಂಡಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಬ್ಬರ ನ್ಯಾಯಾಂಗ ಬಂಧನ ಅವಧಿ ಜ. 22ರಂದು ಮುಕ್ತಾಯಗೊಳ್ಳಲಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts