More

    ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ

    ತಾಳಿಕೋಟೆ: ಪಟ್ಟಣದಲ್ಲಿ ಚೈತನ್ಯ ಸ್ನೇಹಿತರ ಬಳಗ, ಸಮಾನ ಮನಸ್ಕರ ಗೆಳೆಯರ ಬಳಗದ ಸಹಯೋಗದೊಂದಿಗೆ ಸಿದ್ಧೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮ ತಾಳಿಕೋಟೆ ಭಾಗವಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಸಂತಸ ತಂದಿದೆ ಎಂದು ಗಡಿಸೋಮನಾಳ ಗ್ರಾಮದ ಇಂದುಧರ ಸ್ವಾಮಿಗಳು ಹೇಳಿದರು.

    ಪಟ್ಟಣದ ಬಸವೇಶ್ವರ ವೃತ್ತದ ಆವರಣದಲ್ಲಿ ಚೈತನ್ಯ ಸ್ನೇಹಿತರ ಬಳಗ, ಸಮಾನ ಮನಸ್ಕರ ಗೆಳೆಯರ ಬಳಗದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಿದ್ಧೇಶ್ವರ ಶ್ರೀಗಳ ನುಡಿ ನಮನ ಕಾರ್ಯಕ್ರಮ ನೋಡುವಂತಹ ಭಾಗ್ಯ ಕಲ್ಪಿಸಿಕೊಟ್ಟಿರುವ ಬಳಗಕ್ಕೆ ಶರಣಾರ್ಥಿ. ನಮ್ಮ ಭಾವಗಳು ಎಲ್ಲಿಯವರೆಗೆ ಮನವು ತುಂಬಿ ಹಾಡುತ್ತವೆ ಅಲ್ಲಿಯವರೆಗೆ ಮನವು ತುಂಬಿ ಹರಿಯುತ್ತವೆ. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿರುವ ತತ್ವಗಳನ್ನು ಹೇಳಿದಂತೆ ನಡೆಯುವಂತಹ ಭಾಗ್ಯವನ್ನು ಸಿದ್ಧೇಶ್ವರ ಸ್ವಾಮಿಗಳು ಕೊಟ್ಟಿದ್ದಾರೆ ಎಂದರು.

    ಕಾರ್ಯಕ್ರಮ ಸಂಘಟಕ ಮಹಾಂತೇಶ ಮುರಾಳ ಮಾತನಾಡಿ, ಕಾಯಕದಲ್ಲಿ ಸಮಯ ಪ್ರಜ್ಞೆ, ಶಿಸನ್ನು ಸಿದ್ಧೇಶ್ವರ ಅಪ್ಪನವರು ಕಲಿಸಿಕೊಟ್ಟಿದ್ದಾರೆ. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಗಡಿಯಲ್ಲಿ ಸೈನಿಕರು ಹಾಗೂ ಜಮೀನಿನಲ್ಲಿ ರೈತರು ದುಡಿಯುವಂತೆ ನಾವೆಲ್ಲ ಶ್ರದ್ಧೆಯಿಂದ ದುಡಿಯಬೇಕು. ಬದುಕು ಸಾರ್ಥಕಪಡಿಸಿಕೊಳ್ಳಲು ಶ್ರೀಗಳ ತತ್ವಗಳನ್ನು ದಿನನಿತ್ಯ ಓದಿ ಅರ್ಥೈಸಿಕೊಳ್ಳಬೇಕು ಎಂದರು.

    ಚಬನೂರ ರಾಮಲಿಂಗ ಸ್ವಾಮಿಗಳು ಮಾತನಾಡಿ, ಸಿದ್ಧೇಶ್ವರ ಸ್ವಾಮಿಗಳ ಜ್ಞಾನ ಸಂಪತ್ತನ್ನು ನಾವೆಲ್ಲರೂ ಅರಿಯುವ ಪ್ರಯತ್ನ ಮಾಡಬೇಕು. ಸಿದ್ಧೇಶ್ವರ ಸ್ವಾಮಿಗಳು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸಿ ನಡೆದರೆ ಸನ್ಮಾರ್ಗ ದೊರೆಯಲಿದೆ ಎಂದರು.

    ಕಾರ್ಯಕ್ರಮಕ್ಕೂ ಮೊದಲು ಬಸವೇಶ್ವರರ ಮಹಾ ಮೂರ್ತಿಗೆ ಮಹಾ ಪೂಜೆ ಸಲ್ಲಿಸಲಾಯಿತು. ಸಿದ್ಧೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

    ಉಭಯ ಸಂಘಟನೆಗಳ ಗೆಳೆಯರ ಬಳಗದ ಮಾನಸಿಂಗ್ ಕೊಕಟನೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ರಾಜು ಸಜ್ಜನ, ಸಿದ್ದು ಮಡಿವಾಳರ, ಅಣ್ಣು ಹುಬ್ಬಳ್ಳಿ, ಮಹಾಂತೇಶ ಮುರಾಳ, ರವಿ ಚಂದುಕರ, ಪರಶುರಾಮ ತಂಗಡಗಿ, ಇಬ್ರಾಹಿಂ ಮನ್ಸೂರ, ನರಸಿಂಗ್ ವಿಜಾಪುರ, ಸಂತೋಷ ಕುಲಕರ್ಣಿ, ಚಂದು ಸಜ್ಜನ, ದತ್ತಾ ಉಭಾಳೆ, ಭೀಮು ಗೊಲ್ಲರ, ದಶರಥ ಮಹೇಂದ್ರಕರ, ಸೋಮು ಗೆಜ್ಜಿ, ಜಗದೀಶ ಇನಾಮದಾರ, ಪ್ರಕಾಶ ಹಜೇರಿ, ಬಸ್ಸು ಹೊಟ್ಟಿ, ದೇವು ಹಜೇರಿ, ಮಲ್ಲು ಪಾಲ್ಕಿ, ಮುತ್ತು ಕಶೆಟ್ಟಿ, ಲಂಕೇಶ ಪಾಟೀಲ, ಶಿವಾಜಿ ಶೇವಳಕರ, ಸಂಗಮೇಶ ಹಾರಿವಾಳ, ಸಾಹೇಬಗೌಡ ಬಿರಾದಾರ, ಕಾಶಿನಾಥ ಸಜ್ಜನ, ಅಶೋಕ ಬಳಗಾನೂರ, ಶರಣಪ್ಪ ಅಗಸರ, ಸಾಹೀಲ್ ಮುರಾಳ, ವೀರೇಶ ಸಾಸನೂರ, ಪ್ರವೀಣ ಘೋರ್ಪಡೆ ಇತರರಿದ್ದರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts