More

    ಸಿದ್ಧಗಂಗಾ ಶಾಲಾ ವಾರ್ಷಿಕ ಸಂಭ್ರಮ 15ರಿಂದ

    ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ 53ನೇ ವರ್ಷ ಪೂರೈಸಿದ್ದು ಜ.15ರಿಂದ 19ರ ವರೆಗೆ ಐದು ದಿನಗಳ ಕಾಲ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಹೇಳಿದರು.
    ಶೇ.90ಕ್ಕೂ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ , ಸಿಬಿಎಸ್‌ಇ 10ನೇ ತರಗತಿ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಒಟ್ಟು 636 ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಅವರ ಪಾಲಕರ ಜತೆಗೆ ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜ.15ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾದ ಸಿದ್ಧಗಂಗಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸುಪ್ರೀಕೋರ್ಟ್‌ನ ವಿಶಾಂತ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸುವರು.
    ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣನವರ ಗೌರವಾರ್ಥದ ರಾಜ್ಯ ಮಟ್ಟದ ಲಿಖಿತ ಕ್ವಿಜ್‌ನ ವಿಜೇತರಿಗೆ ಪ್ರಥಮವಾಗಿ 25ಸಾವಿರ ರೂ, ದ್ವಿತೀಯ-15 ಸಾವಿರ ರೂ, ತೃತೀಯ 10 ಸಾವಿರ ರೂ, ಹಾಗೂ 14 ಮಕ್ಕಳು ತಲಾ 1 ಸಾವಿರ ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುವುದು. ಇದರ ಜತೆ 45 ದತ್ತಿ ಪ್ರಶಸ್ತಿಗಳು ವಿತರಣೆಯಾಗಲಿದೆ ಎಂದು ಹೇಳಿದರು.
    ಜ.16ರಂದು ಶಾಲಾವರಣದಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ದಾವಣಗೆರೆ ವಿವಿ ಕುಲಪತಿ ಡಾ.ಬಿ.ಡಿ.ಕುಂಬಾರ್ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಪಿ. ವೀಣಾ ಭಾಗವಹಿಸುವರು.
    17ರಂದು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, 18ರಂದು ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಭಾಗವಹಿಸುವರು.
    19ರಂದು ಕುವೆಂಪು ವಿವಿ ಕುಲಪತಿ ಬಿ.ಪಿ.ವೀರಭದ್ರಪ್ಪ ಉದ್ಘಾಟಿಸಲಿದ್ದು, ಎಸ್ಸೆಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ವಿನಯ್ ಅಪ್ಪಣ್ಣನವರ್ ಪಾಲ್ಗೊಳ್ಳುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್. ಜಯಂತ್, ಪಪೂ ಖಾಲೇಜಿನ ಪ್ರಾಚಾರ್ಯ ಜಿ.ಸಿ.ನಿರಂಜನ್, ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ವಿದ್ಯಾರ್ಥಿಗಳಾದ ರಾಮ ಮನೋಹರ, ಹರ್ಷಾ, ಸಾಮ್ರಾಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts