More

    ಸಿಡಿಲಿಗೆ ವ್ಯಕ್ತಿ ಸಾವು;2 ಎತ್ತು ಬಲಿ

    ಸೇಡಂ:ಸುರಿಯುತ್ತಿರುವ ಮಳೆಯಿಂದ ರಕ್ಷಣೆಗಾಗಿ ದೊಡ್ಡಿಯ ಮರದ ಕೆಳಗಡೆ ನಿಂತಿದ್ದ ವ್ಯಕ್ತಿ ಮೇಲೆ ಸಿಡಿಲು ಬಡಿದು ಮೃತಪಟ್ಟ ಘಟನೆ ತಾಲ್ಲೂಕಿನ ವೆಂಕಟಾಪುರ ತಾಂಡಾದಲ್ಲಿ‌ ಭಾನುವಾರ ಸಾಯಂಕಾಲ ಜರುಗಿದೆ. ತಾಂಡಾದ ಮೋಹನ್ ದೇವಜಿ ಚವಾಣ್(66) ಮೃತ ವ್ಯಕ್ತಿ.‌ ಜೊತೆಗೆ ದೊಡ್ಡಿಯಲ್ಲಿದ್ದ ಎರಡು ಎತ್ತುಗಳು ಮೃತಪಟ್ಟಿವೆ. ಎತ್ತುಗಳು ಮೃತ ಮೋಹನ್ ಅವರಿಗೆ ಸೇರಿದವುಗಳಾಗಿದ್ದವು. ಎರಡು ಎತ್ತುಗಳ ಮೌಲ್ಯ ಸುಮಾರು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ. ತಾಲ್ಲೂಕಿನ ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts