More

    ಸಿಐ ಮುನವಳ್ಳಿ ಪಾಲಿಟೆಕ್ನಿಕ್​ನಲ್ಲಿ ಆನ್​ಲೈನ್ ತರಗತಿ

    ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಶ್ರೀಮತಿ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್​ನಲ್ಲಿ ಕಳೆದ ನಾಲ್ಕು ವಾರದಿಂದ ಆನ್​ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ಆರಂಭಿಸಲಾಗಿದೆ.

    ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ 24 ಗ್ರುಪ್​ಗಳಿಗೆ ಹೊಸ ವೇಳಾಪಟ್ಟಿ ಪ್ರಕಾರ ತರಗತಿ ನಡೆಸಲಾಗುತ್ತಿದೆ. ಪ್ರಾಚಾರ್ಯರು ಎಲ್ಲ ಗ್ರುಪ್​ಗಳ ಸದಸ್ಯರಾಗಿದ್ದು, ವಾಟ್ಸ್ ಆಪ್ ಮೂಲಕ ಫೀಡ್​ಬ್ಯಾಕ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಉಪನ್ಯಾಸಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಒಟ್ಟು 8 ವಿಭಾಗಗಳ 24 ತರಗತಿಗಳಲ್ಲಿ ಓದುತ್ತಿರುವ ಸುಮಾರು 1200 ವಿದ್ಯಾರ್ಥಿಗಳ ಪೈಕಿ ಶೇ. 90ರಷ್ಟು ವಿದ್ಯಾರ್ಥಿಗಳು ಆನ್​ಲೈನ್ ಸಕ್ರಿಯರಾಗಿದ್ದು, ಲಾಕ್​ಡೌನ್ ಲಾಭ ಪಡೆಯುತ್ತಿದ್ದಾರೆ.

    ಏ. 27ರಿಂದ ಮೇ 3ರವರೆಗೆ ಮೂರು ತಾಸಿನ 100 ಅಂಕಗಳ ಪ್ರಶ್ನೆ ಪತ್ರಿಕೆ ವಾಟ್ಸ್​ಆಪ್ ಗ್ರುಪ್​ನಲ್ಲಿ ವೇಳಾಪಟ್ಟಿ ಪ್ರಕಾರ ಬಿಡುಗಡೆಯಾಗಿದ್ದು, ಮನೆಯಲ್ಲಿಯೇ ಕುಳಿತು ವಿದ್ಯಾರ್ಥಿಗಳು ಉತ್ತರ ಬರೆಯುತ್ತಿದ್ದಾರೆ. ಇದರಿಂದ ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಮತ್ತು ಪಾಲಕರ ಜಂಟಿ ಪರೀಕ್ಷೆ ನಡೆಸುತ್ತಿರುವುದು ರಾಜ್ಯದಲ್ಲಿಯೇ ಇದು ಮೊದಲ ಪ್ರಯತ್ನ.

    ಪ್ರತಿ ಸೆಮಿಸ್ಟರ್​ಗೆ ಒಂದರಂತೆ ಗ್ರುಪ್ ಮಾಡಲಾಗಿದೆ. ವೈಸ್ ರೆಕಾರ್ಡ್, ವಿಡಿಯೋ, ಪಿಪಿಟಿ ಮತ್ತು ಯೂಟ್ಯೂಬ್ ಲಿಂಕ್​ಗಳ ಮೂಲಕ ಪಾಠ ನಡೆಯುತ್ತಿವೆ ಎಂದು ಪ್ರಾಚಾರ್ಯ ವೀರೇಶ ಅಂಗಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts