More

    ಸಿಎಎ ಬೆಂಬಲಿಸಿ ಕಲಬುರಗಿಯಲ್ಲಿ ಬೃಹತ್ ರ್ಯಾಲಿ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಎಲ್ಲಿ ನೋಡಿದಲ್ಲಿ ಜನಸಾಗರ. ಪ್ರತಿಯೊಬ್ಬರ ಕೈಯಲ್ಲಿ ತ್ರಿವರ್ಣ ಧ್ವಜ. ಮೋದಿ ಮೋದಿ, ಭಾರತ ಮಾತಾಕಿ ಜೈ ಹೀಗೆ ನಾನಾ ರೀತಿಯ ಘೋಷಣೆಗಳು ಮೊಳಗುತ್ತಿದ್ದವು. ಮಹಾನಗರದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು.
    ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಕಲಬುರಗಿ ನಾಗರಿಕ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 30 ಸಾವಿರಕ್ಕೂ ಹೆಚ್ಚು ಜನ ಯಾವುದೇ ಕಾರಣಕ್ಕೂ ಸಿಎಎ ಹಿಂಪಡೆಯಬಾರದು ಎಂದು ಒತ್ತಾಯಿಸಿದರು.
    ಮೋದಿ ತುಮ್ ಆಗೆ ಬಡೋ, ಹಮ್ ತುಮ್ಹಾರೆ ಸಾಥ್ ಹೈ ಎಂದು ಬೆಂಬಲ ಸೂಚಿಸುವ ಘೋಷಣೆಗಳನ್ನು ಮೊಳಗಿಸಿದ ಜನ ಕೇಂದ್ರ ಸರ್ಕಾರಕ್ಕೆ ಭರಪೂರ ಸಾಥ್ ನೀಡಿದರು.
    ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಪ್ರಮುಖ ಬೀದಿಗಳ ಮೂಲಕ ಜಗತ್ ವೃತ್ತದ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಮೆರವಣಿಗೆ ಶಾಂತಿ ಮತ್ತು ಶಿಸ್ತುಬದ್ಧವಾಗಿ ನಡೆಯಿತು. ನಾಗರಿಕ ಸಮಿತಿ ಪದಾಧಿಕಾರಿಗಳು, ಬಿಜೆಪಿ ಪ್ರಮುಖರು, ನಾನಾ ಮಠಾಧೀಶರು, ರಾಜಕೀಯಕ್ಕೆ ಸೇರದ ಗಣ್ಯರು ಹೀಗೆ ಅನೇಕರು ಪಾಲ್ಗೊಂಡು ಸಿಎಎಗೆ ಬೆಂಬಲ ವ್ಯಕ್ತಪಡಿಸಿದರು. ಸಿಎಎ ವಿರೋಧಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದೂ ಆಗ್ರಹಿಸಿದರು.
    ಮೆರವಣಿಗೆಯಲ್ಲಿ ಎರಡು ಕಿಲೋಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿ  ಸಮೂಹ ಗೌರವಯುತವಾಗಿ ತೆಗೆದುಕೊಂಡು ಬಂದಿದ್ದು, ದೇಶಭಕ್ತಿಯನ್ನು ಇಮ್ಮಡಿಗೊಳಿಸುವಂತೆ ಮಾಡಿತು. ರ್ಯಾಲಿಯು ಜಗತ್ ವೃತ್ತಕ್ಕೆ ಬಂದ ಬಳಿಕ ಬಹಿರಂಗ ಜನಜಾಗೃತಿ ಸಭೆಯಾಗಿ ಮಾರ್ಪಟ್ಟಿತು. ನೇತೃತ್ವ ವಹಿಸಿದ್ದ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಮಾತನಾಡಿ, ದೇಶದ ಐಕ್ಯತೆ ಮತ್ತು ಬಲ ಹೆಚ್ಚಿಸಲು ಎಲ್ಲರೂ ಒಂದಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ತಿದ್ದುಪಡಿ ಮಾಡಿರುವ ಪೌರತ್ವ ಕಾಯ್ದೆಯಿಂದ ಯಾರಿಗೂ ಧಕ್ಕೆಯಿಲ್ಲ. ತಪ್ಪು ಸಂದೇಶಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿದರು.
    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ  ಎನ್.ರವಿಕುಮಾರ್, ಸಂಸದ ಡಾ.ಉಮೇಶ ಜಾಧವ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ. ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ, ಡಾ.ಅವಿನಾಶ ಜಾಧವ್, ಸುಭಾಷ ಗುತ್ತೇದಾರ್ ಮೊದಲಾದವರು ಮಾತನಾಡಿ, ಸಿಎಎನಿಂದ ಭಾರತೀಯರಾರಿಗೂ ಸಮಸ್ಯೆಯಿಲ್ಲ. ಯಾರ ಪೌರತ್ವವೂ ಕಸಿದುಕೊಳ್ಳಲ್ಲ. ಆದರೆ ಕೆಲ ವಿನಾಶಕಾರಿ, ವಿಚ್ಛಿದ್ರಕಾರಿ ಶಕ್ತಿಗಳು ಈ ವಿಷಯ ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
    ಯಾವುದೇ ಕಾರಣಕ್ಕೂ ಸಿಎಎ ಕೈಬಿಡಬಾರದು ಎಂಬ ಒಕ್ಕೊರಲ ಒತ್ತಾಯದ ಮನವಿಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಿಜೆಪಿ, ಎಲ್ಲ ಹಿಂದುಪರ ಸಂಘಟನೆಗಳಲ್ಲದೆ ವಿವಿಧ ಸಮಾಜದ 75ಕ್ಕೂ ಹೆಚ್ಚು ಸಂಘಟನೆಗಳು ರ್ಯಾಲಿಗೆ ಸಾಥ್ ನೀಡಿದ್ದವು. 

    ರ್ಯಾಲಿಯಲ್ಲಿ ಪಾಲ್ಗೊಂಡ ಮುಖಂಡರು
    ನಾಗರಿಕ ಸಮಿತಿ ಅಧ್ಯಕ್ಷರಾದ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ, ಪಾಳಾದ ಶ್ರೀ ಗುರುಮೂರ್ತಿ  ಶಿವಾಚಾರ್ಯ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ಶಶೀಲ್ ನಮೋಶಿ, ಯುವ ನಾಯಕ ಚಂದ್ರಕಾಂತ(ಚಂದು) ಪಾಟೀಲ್, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಪ್ರಮುಖರಾದ ರಾಜಕುಮಾರ ಕೋಟೆ, ಹಣಮಂತರಾಯ ಮಲಾಜಿ, ಡಾ.ಎಸ್.ಬಿ. ಕಾಮರಡ್ಡಿ, ಡಾ.ಪ್ರತಿಮಾ ಕಾಮರಡ್ಡಿ, ಡಾ.ಪ್ರಶಾಂತ ಕಮಲಾಪುರ, ನಿತೀನ್ ಗುತ್ತೇದಾರ್, ಹಷರ್ಾ ಗುತ್ತೇದಾರ್, ದಿವ್ಯಾ ಹಾಗರಗಿ, ಎಂ.ಎಸ್. ಪಾಟೀಲ್ ನರಿಬೋಳ, ಶರಣಬಸಪ್ಪ ಅಂಬೆಸಿಂಗೆ, ರಾಘವೇಂದ್ರ ಮೈಲಾಪುರ, ಚಂದ್ರಶೇಖರ ತಳ್ಳಳ್ಳಿ, ಉಮಾಕಾಂತ ನಿಗ್ಗುಡಗಿ, ಶಿವಶರಣಪ್ಪ ನಿಗ್ಗುಡಗಿ, ಶರಣಬಸವಪ್ಪ ಅಷ್ಟಗಿ, ಶರಣಬಸವಪ್ಪ ಕಾಡಾದಿ, ವಿಜಯಕುಮಾರ ಹಳಕಟ್ಟಿ, ವಿದ್ಯಾಸಾಗರ ಶಾಬಾದಿ, ವಿಜಯಕುಮಾರ ಸೇವಲಾನಿ, ಸುಭಾಷ ಬಿರಾದಾರ, ಬಸವರಾಜ ಇಂಗಿನ್, ಡಾ.ಇಂದಿರಾ ಶಕ್ತಿ, ರವಿ ಬಿರಾದಾರ, ನಾಮದೇವ ರಾಠೋಡ್, ಸಂಜೀವನ್ ಯಾಕಾಪುರ, ಮುಕುಂದ ದೇಶಪಾಂಡೆ, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಸಂಗಮೇಶ ನಾಗನಳ್ಳಿ, ಅಂಬಾರಾಯ ಅಷ್ಠಗಿ, ಮಂಜುರಡ್ಡಿ, ಸಿದ್ರಾಮಯ್ಯ ಹಿರೇಮಠ, ರಾಜು ವಾಡೇಕರ್, ಶಂಕರ ಚವ್ಹಾಣ್, ಶಿವರಾಜ ಪಾಟೀಲ್ ರದ್ದೇವಾಡಗಿ, ಗೀತಾ ವಾಡೇಕರ್, ಆರತಿ ತಿವಾರಿ, ಸುವರ್ಣ ಮಲಾಜಿ, ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಕೇದಾರನಾಥ ಪಾಟೀಲ್ ಕೊರಳ್ಳಿ, ಶರಣು ಚಿತಕೋಟಿ, ಗುರಪ್ಪ ನೀಲಾ, ಸಿದ್ದು ಡೋಲೆ, ಗುರುಕೃಪಾ, ಗುರುಬಸಪ್ಪ ಕೋರವಾರ, ಪ್ರಸನ್ನ ಚಿತ್ತಾಪುರಕರ್, ಜಯಂತ ಕಣಗೆ, ರಾಘವೇಂದ್ರ ಕುಲಕಣಿ  ಕೋಗನೂರ, ಪ್ರಹ್ಲಾದ್ ಪೂಜಾರಿ, ರವಿ ಲಾತೂರಕರ್, ದಯಾಘನ್ ಧಾರವಾಡಕರ್, ಪ್ರಹ್ಲಾದ ಜೋಶಿ, ಪ್ರಕಾಶ ಕುಲಕರ್ಣಿ  ಸರಡಗಿ, ಪ್ರವೀಣ ಕುಲಕರ್ಣಿ , ಸಂತೋಷ ಕುಲಕರ್ಣಿ , ಗೋಪಾಲಕೃಷ್ಣ ಸರಡಗಿ, ಶಿವಾನಂದ ಅಷ್ಠಗಿ, ಬಸವರಾಜ ಹಡಗಿಲ್, ಶಿವಾನಂದ ಸಾಲಿಮಠ, ಸಂಗಮೇಶ ಕಲ್ಯಾಣಿ, ಸತೀಶ ಪಾಟೀಲ್ ಆಲಗೂಡ, ನಾಗರಾಜ ಗುಂಡಗುರ್ತಿ , ಮಲ್ಲಿಕಾರ್ಜುನ  ಉದನೂರ, ಜಗದೀಶ ಹುನಗುಂದ, ಮಹೇಶ ರಡ್ಡಿ, ಅಪ್ಪಾಸಾಬ ಪಾಟೀಲ್, ಶ್ರೀನಿವಾಸ ದೇಸಾಯಿ, ಗುರುರಾಜ ಜೋಶಿ ನೆಲೋಗಿ, ಹರ್ಷವರ್ಧನ ಕುಲಕರ್ಣಿ , ಶರಣ್ ಪಾಟೀಲ್, ಅಮಿತ್ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts