More

    ಸಿಎಂ ಯಡಿಯೂರಪ್ಪ ಕಳವಳ

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂಪ್ಪನವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗುರುವಾರ ತಮ್ಮನ್ನು ಭೇಟಿ ಮಾಡಿದ ಸಂಸದ ಡಾ. ಉಮೇಶ ಜಾಧವ್, ಎಂಎಲ್ಸಿ ಬಿ.ಜಿ. ಪಾಟೀಲ್ ಮತ್ತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರೊಡನೆ ಚರ್ಚಿಸಿದ ಮುಖ್ಯಮಂತ್ರಿ ಈ ರೋಗ ನಿಯಂತ್ರಣಕ್ಕೆ ಬರುವ ರೀತಿಯಲ್ಲಿ ಎಲ್ಲರೂ ಪ್ರಯತ್ನಿಸಿರಿ ಎಂದು ಮನವಿ ಮಾಡಿದರು.
    ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಕರೊನಾ ವಿರುದ್ಧ ಸಮರ ಸಾರಿದ್ದೀರಿ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಕಲಬುರಗಿ ಕರೊನಾ ಮುಕ್ತ ಜಿಲ್ಲೆಯಾಗಬೇಕು. ಅದಕ್ಕಾಗಿ ಎಲ್ಲರೂ ಪ್ರಯತ್ನಿಸುವುದು ಅಗತ್ಯ ಎಂದರು.
    ಜಿಲ್ಲೆಯ ಕರೊನಾ ಮಾಹಿತಿ ಪಡೆದುಕೊಂಡ ಅವರು ಸರ್ಕಾರ ಜಿಲ್ಲೆಗೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದರು. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರ ಎಲ್ಲ ರೀತಿಯಿಂದ ಹೆಚ್ಚಿನ ಸಹಕಾರ ನೀಡಬೇಕೆಂದು ಈ ಮೂವರು ಪ್ರಮುಖರು ಮನವಿ ಮಾಡಿದರು.
    ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಲ್ಲಿ ಸಿಕ್ಕು ಬಿದ್ದಿರುವ ಕಲ್ಯಾಣ ಕನರ್ಾ ಟಕದ ಸುಮಾರು 30 ಸಾವಿರ ಕೂಲಿ ಕಾಮರ್ಿಕರು ಮತ್ತು ಜನರ ಆರೋಗ್ಯ ಪರೀಕ್ಷಿಸಿ ಮರಳಿ ಅವರವರ ಊರಿಗೆ ಕರೆ ತರುವ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದೇವೆ. ಒಂದು ವೇಳೆ ಅವರನ್ನು ರಾಜ್ಯಕ್ಕೆ ಕರೆ ತರಲು ಸಾಧ್ಯವಾಗದಿದ್ದರೆ ಅವರು ಎಲ್ಲಿದ್ದಾರೋ ಅಲ್ಲಿಯೇ ಅವರಿಗೆ ಎಲ್ಲ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾಗಿ ಡಾ. ಉಮೇಶ ಜಾಧವ್ ಹೇಳಿದರು.
    ಸಂಸದ ಮತ್ತು ಶಾಸಕರ ಎಲ್ಲ ಮನವಿಗಳಿಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts