More

    ಸಿಇಟಿಗೆ ಜಿಲ್ಲೆಯಲ್ಲಿ 12 ಪರೀಕ್ಷಾ ಕೇಂದ್ರಗಳು

    ಕಾರವಾರ: ಜುಲೈ 30 ಮತ್ತು 31ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದ್ದಾರೆ.

    ಸಿಇಟಿ ಪರೀಕ್ಷೆ ಸಿದ್ಧತೆ ಕುರಿತು ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ಹಾಗೂ ಪರೀಕ್ಷಾ ಕೇಂದ್ರಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಈ ವರ್ಷ ಕೋವಿಡ್-19 ವಿಶೇಷ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸುತ್ತಿದ್ದು, ಅವರ ಆರೋಗ್ಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಪರೀಕ್ಷೆ ನಡೆಸುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕೋವಿಡ್-19 ಪಾಸಿಟಿವ್ ಇರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಆದರೆ, ಕಂಟೇನ್ಮೆಂಟ್ ಜೋನ್, ಹೋಂ ಕ್ವಾರಂಟೈನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ ಎಂದು ಸೂಚಿಸಿದರು.

    12 ಕೇಂದ್ರಗಳು: ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್. ಬಗಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ವರ್ಷ 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಈ ಬಾರಿ ಕೋವಿಡ್ ಕಾರಣದಿಂದ ಅದನ್ನು 12ಕ್ಕೆ ಏರಿಸಲಾಗಿದೆ. ಅಂಕೋಲಾ ಸರ್ಕಾರಿ ಪಿಯು ಕಾಲೇಜ್​ನಲ್ಲಿ 168, ಭಟ್ಕಳದ ಅಂಜುಮನ್ ಪಿಯು ಕಾಲೇಜ್​ನಲ್ಲಿ 264, ದಾಂಡೇಲಿಯ ಬಂಗೂರ್ ನಗರ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ 264, ಹಳಿಯಾಳದ ಶಿವಾಜಿ ಪಿಯು ಕಾಲೇಜ್​ನಲ್ಲಿ 144, ಹೊನ್ನಾವರದ ಎಂಪಿಇಎಸ್​ಎಸ್​ಡಿಎಂ ಪಿಯು ಕಾಲೇಜ್​ನಲ್ಲಿ 240, ಕಾರವಾರದ ಸರ್ಕಾರಿ ಪಿಯು ಕಾಲೇಜ್​ನಲ್ಲಿ 264, ಮತ್ತು ಚಿತ್ತಾಕುಲಾ ಶಿವಾಜಿ ಕಾಲೇಜ್​ನಲ್ಲಿ 336, ಕುಮಟಾದ ಡಾ.ಎ.ವಿ. ಬಾಳಿಗಾ ಪಿಯು ಕಾಲೇಜ್​ನಲ್ಲಿ 408 ಮತ್ತು ಸರ್ಕಾರಿ ಪಿಯು ಕಾಲೇಜ್​ನಲ್ಲಿ 312, ಶಿರಸಿಯ ಎಂಇಎಸ್ ಪಿಯು ಕಾಲೇಜ್​ನಲ್ಲಿ 336, ಮಾರಿಕಾಂಬಾ ಪಿಯು ಕಾಲೇಜ್​ನಲ್ಲಿ 528 ಹಾಗೂ ಎಂಇಎಸ್ ಚೈತನ್ಯ ಪಿಯು ಕಾಲೇಜ್​ನಲ್ಲಿ 240 ವಿದ್ಯಾರ್ಥಿಗಳು ಸೇರಿ ಒಟ್ಟು, 3,504 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು. ಡಿಎಚ್​ಒ ಡಾ. ಶರದ್ ನಾಯ್ಕ, ತಹಸೀಲ್ದಾರ್ ಆರ್.ವಿ. ಕಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts