More

    ಸಿಂದಗಿ ಉಪಸಮರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರ: ವಿಜುಗೌಡ ಪಾಟೀಲ ಹೇಳಿದ್ದೇನು ಗೊತ್ತಾ?

    ವಿಜಯಪುರ: ಸಿಂದಗಿ ಉಪ ಸಮರದ ಕಾವು ದಿನೇ ದಿನೇ ಏರುತ್ತಿರುವ ಹೊತ್ತಿನಲ್ಲಿಯೇ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮನದಿಂಗಿತ ಹೊರಹಾಕಿದ್ದು “ಹೈಕಮಾಂಡ್ ನಿರ್ಧಾರಕ್ಕೆ ಬದ್ದ” ಎನ್ನುವ ಮೂಲಕ ಟಿಕೆಟ್ ಸಿಕ್ಕರೆ ತಾವೂ ಒಂದು ಕೈ ನೋಡಿಬಿಡುವ ಕುರುಹು ಹೊರಹಾಕಿದ್ದಾರೆ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ನನ್ನ ತವರು ಕ್ಷೇತ್ರ, ನಾನು ಹುಟ್ಟಿ ಬೆಳೆದಿದ್ದು ಸಿಂದಗಿಯಲ್ಲೇ, ನಮ್ಮ ತಂದೆ ತೀರಿದ ಬಳಿಕ ವಿಜಯಪುರಕ್ಕೆ ಬಂದೆ, ಮೂವರು ಸಹೋದರರು ಹಾಗೂ ಅಕ್ಕ ವಿಜಯಪುರದಲ್ಲಿಯೇ ನೆಲೆಸಿದೆವು…..ಈಗಲೂ ನಮ್ಮ ಆಸ್ತಿ ಸಿಂದಗಿಯಲ್ಲೇ ಇದೆ…ಹೀಗಾಗಿ ಅಲ್ಲಿನ ಜನರಿಗೆ ನನ್ನ ಮೇಲೆ ಅಭಿಮಾನ ಜಾಸ್ತಿ ಎನ್ನುವ ಮೂಲಕ ಕ್ಷೇತ್ರದೊಂದಿಗಿನ ನಂಟು ಬಿಚ್ಚಿಟಿದ್ದಾರೆ.

    ಮುಂದುವರಿದು ನಿಗಮ ಸ್ಥಾನ ಸಿಗುತ್ತಿದ್ದಂತೆ ಸಿಂದಗಿಯ ಅಭಿಮಾನಿಗಳು ಸನ್ಮಾನ ಹಮ್ಮಿಕೊಂಡರು. ಮೆರವಣಿಗೆ ಮಾಡುತ್ತಾರೆಂದು ಅಂದುಕೊಂಡಿರಲಿಲ್ಲ. ಅಲ್ಲಿನ ಭವ್ಯ ಮೆರವಣಿಗೆ ಆಶ್ಚರ್ಯ ಚಕಿತವಾಗಿಸಿತು. ಅವರ ಅಭಿಮಾನಕ್ಕೆ ಋಣಿ ಎಂದರು.

    ಹಾಗಾದರೆ ಸಿಂದಗಿ ಉಪ ಚುನಾವಣೆಯಿಂದ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ “ನಾನೆಂದೂ ಟಿಕೆಟ್ ಬೇಡಿಲ್ಲ ಅಲ್ಲಿನ ಜನ ಒತ್ತಾಯ ಮಾಡುತ್ತಿದ್ದಾರೆ, ನಾನು ಬಬಲೇಶ್ವರ ತೊರೆಯಲ್ಲ, ಬಬಲೇಶ್ವರ ಜನ ನನ್ನನ್ನು ನಂಬಿ ಮತ ಹಾಕಿದ್ದಾರೆ ಚುನಾವಣೆಯಲ್ಲಿ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ ಅವರನ್ನು ಬಿಟ್ಟು ಹೋಗಲ್ಲ” ಎಂದರಲ್ಲದೇ ಪಕ್ಷಸ ಹೈಕಮಾಂಡ್ ಸೂಚಿಸಿದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ “ನನಗೆ ಮತದಾರರು ಹಾಗೂ ಹೈಕಮಾಂಡಗ ಎರಡೂ ಮುಖ್ಯ” ಅವರೊಪ್ಪಿದರೆ ಎಲ್ಲದಕ್ಕೂ ಸಿದ್ದ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts