More

     ಸಾಹಿತ್ಯ ಅಧ್ಯಯನದಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿ

    ಆಲ್ದೂರು: ಒಂದು ಗಿಡದ ಬೆಳವಣಿಗೆಗೆ ನೀರು, ಗೊಬ್ಬರ, ಬೆಳಕು ಹೇಗೆ ಅವಶ್ಯಕವೋ ಹಾಗೆಯೇ ಸಮಾಜದ ಬದಲಾವಣೆ ಮತ್ತು ಮನುಷ್ಯನ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಸಾಹಿತ್ಯ ಅವಶ್ಯ ಎಂದು ಆಲ್ದೂರು ಗ್ರಾಮ ಪಂಚಾಯಿತಿ ಸದಸ್ಯ ನವರಾಜ್ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಶ್ರಾವಣ ಸಂಜೆಯ ಸಾಹಿತ್ಯ ಸುಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾರ್ಲ್​ವಾರ್ಕ್ಸ್ ಪುಸ್ತಕದಿಂದ ಜಗತ್ತಿನಲ್ಲೇ ಬದಲಾವಣೆಯಾಗಿದೆ. ದಲಿತ ಸಾಹಿತ್ಯ ಬಂದ ಮೇಲೆ ಕನ್ನಡ ಸಾಹಿತ್ಯದಲ್ಲಿ ಬದಲಾವಣೆಯಾಗಿದೆ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯದಲ್ಲಿ ಏನೂ ಅಲ್ಲ, ಅದು ಕೇವಲ ಬೂಸ (ಹೊಟ್ಟು) ಎಂದು ಹೇಳಿ ರಾಜ್ಯದಲ್ಲಿ ಮಂತ್ರಿ ಪದವಿಯನ್ನೇ ಕಳೆದುಕೊಂಡರು. ಆ ಸಂದರ್ಭ ಹುಟ್ಟಿಕೊಂಡಿದ್ದು ದಲಿತ ಸಾಹಿತ್ಯ. ಬಂಡಾಯ ಸಾಹಿತ್ಯವನ್ನು ಕಡೆಗಣಿಸಿ ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರನ್ನಾಗಿ ಸಿದ್ದಲಿಂಗಯ್ಯ ಅವರನ್ನು ಒಪ್ಪಿಕೊಂಡಿತು ಎಂದರು.

    ರಾಷ್ಟ್ರಕವಿ ಕುವೆಂಪು ವಿರಚಿತ ನಾಟಕಗಳಾದ ಬೆರಳ್​ಗೆ ಕೊರಳ್, ಶೂದ್ರ ತಪಸ್ವಿ, ಜಲಗಾರ ಇವು ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸಲು ಪೂರಕವಾದ ಸಾಹಿತ್ಯ ಪ್ರಕಾರಗಳು ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts