More

    ಸಾಹಿತ್ಯಾಭಿರುಚಿ ಬೆಳೆಸುವ ಕಥಾವನ ಕಾರ್ಯಕ್ರಮ

     ಕೆ.ಆರ್.ಪೇಟೆ: ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಜತೆಗೆ ಅವರಲ್ಲಿ ಸಾಹಿತ್ಯ ಸೃಷ್ಟಿಗೆ ಅಗತ್ಯವಿರುವ ಅವಕಾಶಗಳನ್ನು ಒದಗಿಸಿಕೊಡಲು ಕಥಾವನ ಕಾರ್ಯಕ್ರಮ ಪೂರಕವಾಗಿದೆ ಎಂದು ಸಂಪನ್ಮೂಲ ಶಿಕ್ಷಕಿ ಡಾ.ಎಚ್.ಎಸ್.ರಶ್ಮಿ ಹೇಳಿದರು.

    ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿರುವ ಅಜೀಂ ಪ್ರೇಮ್‌ಜಿ ಫೌಂಡೇಷನ್ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ಮಾಧ್ಯಮಿಕ ಶಾಲಾ ಮಕ್ಕಳಿಗೆ ಕಥಾವನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಮ್ಮಲ್ಲಿರುವ ಸಾಹಿತ್ಯದ ಮಜಲುಗಳನ್ನು ಇಲ್ಲಿ ಓರೆಗೆ ಹಚ್ಚುವ ಮೂಲಕ ಮುಂದೆ ಉತ್ತಮ ಸಾಹಿತ್ಯ ಸೃಷ್ಟಿಗೆ ವೇದಿಕೆ ಕಲ್ಪಿಸಿಕೊಳ್ಳಬಹುದಾಗಿದೆ ಎಂದರು.

    ಸಂಪನ್ಮೂಲ ಶಿಕ್ಷಕ ಅರುಣ್ ಮಾತನಾಡಿ, ಕಳೆದ 12 ವರ್ಷಗಳಿಂದಲೂ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಚಿತ್ರ ಓದು, ಚಿತ್ರಕ್ಕೊಂದು ಕಥೆ ಕಟ್ಟುವಿಕೆ, ಚಿತ್ರರಚನೆ, ಕಥೆಯ ಗಟ್ಟಿ ಓದು, ಪದ್ಯರಚನೆ ಮುಂತಾದ ಕ್ಷೇತ್ರದಲ್ಲಿ ತಮ್ಮ ಸಾಹಿತ್ಯವನ್ನು ಅಭಿವ್ಯಕ್ತಿಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ಕೆಪಿಎಸ್ ಶಾಲೆಯ ಶಿಕ್ಷಕಿಯರಾದ ಮಾಧವಿ, ಮಾನಸ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts