More

    ಸಾವಿರ ದಾಟಿದ ಕರೊನಾ ಕೇಸ್

    ಕಲಬುರಗಿ: ಹತ್ತು ಜನರ ಬಲಿ ಪಡೆದು ರಣಕೇಕೆ ಮುಂದುವರಿಸಿದ ಮಹಾಮಾರಿ ಕರೊನಾ, ಜಿಲ್ಲೆಯಲ್ಲಿ ಒಂದು ಸಾವಿರದ ಗಡಿ ದಾಟಿದೆ. ಮಂಗಳವಾರ ಮತ್ತೆ 63 ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1007ಕ್ಕೇರಿದೆ.
    ಈ ಮಧ್ಯೆ 15 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಇವರೂ ಸೇರಿ ಇದುವರೆಗೆ 474 ಜನ ಬಿಡುಗಡೆಯಾಗಿದ್ದಾರೆ. 523 ಸಕ್ರಿಯ ಪ್ರಕರಣಗಳಿವೆ. ಕರೊನಾ ದೇಶಕ್ಕೆ ಕಾಲಿಡುತ್ತಲೇ ಮೊದಲ ಸಾವು ಕಂಡದ್ದು ಕಲಬುರಗಿಯಲ್ಲಿ ಎಂಬುದನ್ನು ಮರೆಯಲಾಗದು. ದೇಶಕ್ಕೆ ಹೆಮ್ಮಾರಿ ಕಾಲಿಟ್ಟು 100 ದಿನ ಕಳೆದಿದ್ದು, 1000ದ ಗಡಿ ದಾಟಿ ಮುನ್ನಡೆದಿದೆ.
    ಮಂಗಳವಾರ ಪತ್ತೆಯಾದ 63 ಪ್ರಕರಣಗಳಲ್ಲಿ ಒಂದು ಗೋವಾ, ನಾಲ್ವರು ಸೌದಿ ಅರೇಬಿಯಾದಿಂದ ಬಂದಿದ್ದು, ಇವರ ಸಂಪರ್ಕಕ್ಕೆ ಬಂದವರ ಪತ್ತೆ ಹಚ್ಚಲಾಗುತ್ತಿದೆ. ನಾಲ್ವರಿಗೆ ಅನ್ಯ ಸೋಂಕಿತರ ನೇರ ಸಂಪರ್ಕದಿಂದ ವೈರಸ್ ಅಂಟಿದೆ. ಉಳಿದವರೆಲ್ಲರಿಗೆ ಮಹಾರಾಷ್ಟ್ರ ಲಿಂಕ್ ಇದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
    ಇವರೆಲ್ಲರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಒಂಬತ್ತು ರೋಗಿಗಳನ್ನು ಐಸಿಯು ಘಟಕಕ್ಕೆ ವರ್ಗಾಯಿಸಲಾಗಿದೆ. ರೋಗಿಗಳಿಗೆ ಸಂಬಂಧಿಸಿದ ಪ್ರದೇಶಗಳನ್ನು ಲಾಕ್ಡೌನ್ ಮಾಡಲಾಗಿದೆ. ಅಲ್ಲದೇ ಅವರವರ ಸಂಬಂಧಿಕರನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ.
    ಎರಡು ವರ್ಷದ ಗಂಡು, ಆರು ವರ್ಷದ ಎರಡು ಗಂಡು, 10 ವರ್ಷದ ಎರಡು ಗಂಡು, ನಾಲ್ಕು, ಐದು ಮತ್ತು ಎಂಟು ವರ್ಷದ ಹೆಣ್ಣು ಮಕ್ಕಳು, 27 ಮಹಿಳೆಯರಿಗೆ ಸೋಂಕು ತಗುಲಿದೆ. 30 ವರ್ಷದ ಪುರುಷ ಪಿ-6987, 30 ವರ್ಷದ ಮಹಿಳೆ ಪಿ-6768, 36 ವರ್ಷದ ಪುರುಷ ಪಿ-5900, 49 ವರ್ಷದ ಮಹಿಳೆ ಪಿ-6323 ಸಂಪರ್ಕಕ್ಕೆ ಬಂದಿದ್ದಾರೆ. 29 ವರ್ಷದ ಪುರುಷ (ಪಿ-7508), 18 ವರ್ಷದ ಯುವಕ (ಪಿ-7511), 40 ವರ್ಷದ ಮಹಿಳೆ (ಪಿ-7512) ಸಂಪರ್ಕ ಪತ್ತೆ ಹಚ್ಚಬೇಕಾಗಿದೆ.

    ಇಂದಿನ ಸೋಂಕಿತರುಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ 48 ಕರೊನಾ ಸೊಂಕಿತರು ಕಾಣಿಸಿಕೊಂಡಿದ್ದಾರೆ. ಕಮಲಾಪುರ ತಾಲೂಕಿನಲ್ಲಿ 29 ಹಾಗೂ ಕಲಬುರಗಿ ತಾಲೂಕಿನಲ್ಲಿ 15 ಮತ್ತು ಚಿಂಚೋಳಿ ತಾಲೂಕಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

    ಜಿಲ್ಲೆಯಲ್ಲಿ 15 ಜನರು ಚೇತರಿಕೆ: ಜಿಲ್ಲೆಯಲ್ಲಿ ಮಂಗಳವಾರ 15 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೆ 475 ಜನರು ಚೇತರಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಚಿತ್ತಾಪುರ-5, ಚಿಂಚೋಳಿ- 2, ಕಾಳಗಿ- 3 , ಆಳಂದ- 4 ಹಾಗೂ ಶಹಾಬಾದ್ ತಾಲೂಕಿನ ಓರ್ವ ವ್ಯಕ್ತಿ ಬಿಡುಗಡೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts