More

    ಸಾವಿರಾರು ಮೀನುಗಳ ಮಾರಣಹೋಮ

    ಧಾರವಾಡ: ಬೆಳಗಾವಿ ಜಿಲ್ಲೆ ಸವದತ್ತಿ ಬಳಿಯ ಸಕ್ಕರೆ ಕಾರ್ಖಾನೆಯ ರಾಸಾಯನಿಕ ಮಿಶ್ರಿತ ನೀರು ತುಪ್ಪರಿ ಹಳ್ಳಕ್ಕೆ ಸೇರಿ ಸಾವಿರಾರು ಮೀನುಗಳು ಪ್ರಾಣ ಬಿಟ್ಟ ಘಟನೆ ಸಂಭವಿಸಿದ್ದು, ಹಳ್ಳದ ಇಕ್ಕೆಲದ ಹಳ್ಳಿಗಳ ಜನರಲ್ಲಿ ಆತಂಕ ಉಂಟಾಗಿದೆ.

    ಸತ್ತ ಮೀನುಗಳು ಹಳ್ಳದಲ್ಲಿ ತೇಲುತ್ತಲೇ ಇವೆ. ಮತ್ತಿಷ್ಟು ಮೀನುಗಳು ಸಾಯುತ್ತಿರುವುದು ಸೋಮವಾರ ಕಂಡುಬಂದಿದೆ. ಬೆಳಗಾವಿ ಜಿಲ್ಲೆಯ ಶಾಸಕಿಯೊಬ್ಬರ ಮಾಲೀಕತ್ವದ ಕಾರ್ಖಾನೆಯ ರಾಸಾಯನಿಕ ಮಿಶ್ರಿತ ನೀರನ್ನು ಪಕ್ಕದ ಕಲ್ಲ ಹಳ್ಳಕ್ಕೆ ಬಿಡಲಾಗುತ್ತದೆ. ಅದು ಬೆಳಗಾವಿ ಜಿಲ್ಲೆ ಚಿಕ್ಕಉಳ್ಳಿಗೇರಿ, ಇನಾಮಹೊಂಗಲ ಮೂಲಕ ಹರಿದು ಧಾರವಾಡ ಜಿಲ್ಲೆ ಶಿರೂರ ಹಾಗೂ ಆಯಟ್ಟಿ ಬಳಿಯ ತುಪ್ಪರಿ ಹಳ್ಳಕ್ಕೆ ಎರಡು ದಿನಗಳಿಂದ ಸೇರುತ್ತಿದೆ. ಈ ನೀರಿನಿಂದಾಗಿಯೇ ಮೀನುಗಳು ಸಾವನ್ನಪ್ಪಿವೆ ಎಂಬ ಮಾತು ಗ್ರಾಮಸ್ಥರಿಂದ ಕೇಳಿಬಂದಿದೆ.

    ತುಪ್ಪರಿ ಹಳ್ಳದ ನೀರು ಪಕ್ಕದ ಹೊಲದಲ್ಲಿ ಕೃಷಿಗೆ ಬಳಕೆಯಾಗುತ್ತಿದೆ. ಜಾನುವಾರುಗಳೂ ಇದೇ ನೀರನ್ನು ಕುಡಿಯುತ್ತವೆ. ಹೀಗಾಗಿ ರೈತರಲ್ಲಿ ಆತಂಕ ಮೂಡಿದೆ. ತುಪ್ಪರಿ ಹಳ್ಳದ ನೀರು ನವಲಗುಂದ ತಾಲೂಕಿನುದ್ದಕ್ಕೂ ಹರಿಯುವ ಬೆಣ್ಣಿಹಳ್ಳ ಸೇರಿದರೆ ಹೆಚ್ಚಿನ ಅನಾಹುತ ಉಂಟಾಗಬಹುದು ಎಂದೂ ಸಾರ್ವಜನಿಕರು ದುಗುಡ ವ್ಯಕ್ತಪಡಿಸುತ್ತಿದ್ದಾರೆ.

    2 ವರ್ಷಗಳ ಹಿಂದೆ ಸವದತ್ತಿ ಬಳಿಯ ಕಾರ್ಖಾನೆಯಿಂದಲೇ ತುಪ್ಪರಿ ಹಳ್ಳ ಸೇರಿದ್ದ ಕಲುಷಿತ ನೀರು ಅವಾಂತರ ಸೃಷ್ಟಿಸಿತ್ತು. ಈಗ ಮೀನುಗಳ ಸಾವಿಗೆ ಕಾರಣವಾಗಿದೆ. ಈ ಕುರಿತು ಸ್ಥಳೀಯ ನೂತನ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಅವರು ಗ್ರಾಮ ಪಂಚಾಯಿತಿ ಮೂಲಕ ತಹಸೀಲ್ದಾರರಿಗೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ಶಿರೂರು, ಆಯಟ್ಟಿ ಮತ್ತಿತರ ಗ್ರಾಮದ ಜನರು ಪತ್ರಿಕೆಗೆ ತಿಳಿಸಿದ್ದಾರೆ.

    ತುಪ್ಪರಿ ಹಳ್ಳಕ್ಕೆ ರಾಸಾಯನಿಕ ನೀರು ಸೇರಿ ಮೀನುಗಳು ಸಾಯುತ್ತಿವೆ. ಎರಡು ವರ್ಷಗಳ ಹಿಂದೆ ಸಹ ಇದೇ ರೀತಿ ಆಗಿತ್ತು. ಆಗ ಅಧಿಕಾರಿಗಳು ನೀರಿನ ಪರೀಕ್ಷೆ ನಡೆಸಿ ರಾಸಾಯನಿಕ ಮಿಶ್ರಣವಾಗಿದೆ ಎಂದು ಖಚಿತಪಡಿಸಿದ್ದರು. ಇದೀಗ ಮತ್ತೆ ಕಾರ್ಖಾನೆ ನೀರು ಹಳ್ಳ ಸೇರುತ್ತಿದೆ. ನೀರಿನ ಪರೀಕ್ಷೆ ನಡೆಸುವಂತೆ ತಾಲೂಕು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲು ನಾವು (ಗ್ರಾಮಸ್ಥರು) ನಿರ್ಧರಿಸಿದ್ದೇವೆ. |ಪ್ರಭುಗೌಡ, ನವಲಗುಂದ ತಾಲೂಕು ಶಿರೂರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts