More

    ಸಾವಿರಾರು ಎಕರೆ ಬೆಳೆ ಜಲಾವೃತ

    ಶಿರೋಳ: ಮಲಪ್ರಭೆ ಪ್ರವಾಹದ ಆರ್ಭಟಕ್ಕೆ ಗ್ರಾಮೀಣ ಪ್ರದೇಶದ ಬದುಕು ತತ್ತರಿಸಿದೆ. ಸಾವಿರಾರು ಎಕರೆ ಬೆಳೆ ಜಲಾವೃತವಾಗಿದ್ದು, ರೈತರನ್ನು ಚಿಂತೆಗೀಡುಮಾಡಿದೆ.

    ಶಿರೋಳ, ಕೊಣ್ಣೂರು, ಕಲ್ಲಾಪೂರ, ವಾಸನ, ಬೂದಿಹಾಳ, ಲಖಮಾಪೂರ, ಬೆಳ್ಳೇರಿ, ಗುಳಗಂದಿ, ಮೆಣಸಗಿ ಹಾಗೂ ಕಪ್ಪಲಿ ಗ್ರಾಮಗಳು ಪ್ರವಾಹಕ್ಕೆ ನಲುಗಿವೆ.

    ಸಾವಿರಾರು ಎಕರೆ ಗೋವಿನ ಜೋಳ, ಹೆಸರು, ಹತ್ತಿ, ಸೂರ್ಯಕಾಂತಿ, ತರಕಾರಿ ಬೆಳೆಗಳು ಹಾಗೂ ಬಾಳೆ, ಪೇರಲ ತೋಟ ಜಲ ಗಂಢಾಂತರಕ್ಕೆ ನಾಶವಾಗಿವೆ. ನದಿದಂಡೆಯ ಹತ್ತಿರದ ಹೊಲಗಳಲ್ಲಿ ನಿರ್ವಿುತವಾದ ಕೃಷಿ ಹೊಂಡಗಳು ನೆಲಸಮಗೊಂಡಿವೆ.

    ಶಿರೋಳ – ಕಿತ್ತಲಿ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಶಿರೋಳ ಗ್ರಾಮದ ಮಲಪ್ರಭಾ ದಡದಲ್ಲಿರುವ ಹೊಳೆ ಆಂಜನೇಯ ದೇವಸ್ಥಾನ ಮುಳಗಡೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts