More

    ಸಾಲ ವಸುಲಾತಿಯಲ್ಲಿ ರಾಜ್ಯಕ್ಕೆ 4 ಸ್ಥಾನ


    ಯಾದಗಿರಿ: ಪಿಎಲ್ಡಿ ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ಲಾಭವನ್ನು ಗ್ರಾಮೀಣ ಭಾಗದ ರೈತರಿಗೆ ಪ್ರಾಮಾಣಿಕವಾಗಿ ಒದಗಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುದರ್ಶನ ಪಾಟೀಲ್ ಜೈಗ್ರಾಮ ತಿಳಿಸಿದರು.

    ಸೋಮವಾರ ನಗರದ ಚಚರ್್ಹಾಲ್ನಲ್ಲಿ ಆಯೋಜಿಸಿದ್ದ 64ನೇ ವಾಷರ್ಿಕ ಮಹಾಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಒಟ್ಟು 9884 ಸದಸ್ಯರನ್ನು ಒಳಗೊಂಡಿದೆ 83.45 ಲಕ್ಷಗಳ ಷೇರು ಬಂಡವಾಳವಿದ್ದು ಇದರಲ್ಲಿ 5167 ಸಾಲಗಾರ ಸದಸ್ಯರಿದ್ದಾರೆ, ದೀಘರ್ಾವ ಯೋಜನೆಗಳಲ್ಲಿ ಈ ವರ್ಷದಲ್ಲಿ ವಿವಿಧ ಉದ್ದೇಶಗಳಿಗಾಗಿ ರೈತರಿಗೆ 57.18 ಲಕ್ಷ ರೂ. ಸಾಲ ಹಂಚಿಕೆ ಮಾಡಲಾಗಿದೆ ಅದರಲ್ಲಿ ಒಟ್ಟು 341.68 ಲಕ್ಷಗಳ ಹೊರಬಾಕಿ ಇದೆ ಎಂದು ವಿವರಿಸಿದರು.

    ಕಳೆದ 2ವರ್ಷಗಳಲ್ಲಿ ಉದ್ಬವಿಸಿದ ಕರೋನ ಸೋಂಕಿನ ದಾಳಿ ಹಾಗೂ ಪ್ರಕೃತಿ ವಿಕೋಪಗಳಿಂದಾಗಿ ಸಾಲ ವಸೂಲಾತಿ ಪ್ರಕ್ರಿಯೇಯಲ್ಲಿ ತೊಂದರೆಯಾದರೂ ಹಲವು ರಿಯಾಯಿತಿ ಮತ್ತು ಬ್ಯಾಂಕ್ ನೀಡಿರುವ ಬಡ್ಡಿ ಯೋಜನೆಯ ರಿಯಾಯಿತಿಯಿಂದ, ನಮ್ಮ ಆಡಳಿತ ಮಂಡಳಿ ಹಾಗೂ ಅಕಾರಿಗಳ ಶ್ರಮದಿಂದ ಶೇ.79.59 ವಸುಲಾತಿ ಸಾಸಿ, ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸುವ ಜತೆಗೆ ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವುದು ಸಂತಸ ತಂದಿದೆ ಎಂದರು.

    ಬ್ಯಾಂಕ್ ಉಪದ್ಯಾಕ್ಷ ವಿಶ್ವನಾಥ ನೀಲಹಳ್ಳಿ ಮಾತನಾಠ್ಠಛ್ಟ್ಛಖ್ಞ ಡಿ, ರೈತರ ಸ್ನೇಹಿಯಾಗಿರುವ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ಗಳಿಗೆ ರಾಜ್ಯ ವಿಶೇಷ ಅನುದಾನ ನೀಡಬೇಕು. ಅಂದಾಗ ಮಾತ್ರ ಎಲ್ಲ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಬ್ಯಾಂಕ್ನ ವ್ಯವಸ್ಥಾಪಕರಾದ ಶರಣಭೂಪಾಲ ಬಾನಾ ವರದಿ ವಾಚಿಸಿದರು. ಆಡಳಿತ ಮಂಡಳಿ ನಿರ್ದೇಶಕರಾದ ರಾಮಣ್ಣ ಬಳಿಚಕ್ರ ಕೊಟಗೇರಾ, ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ದಶರಥ ರಾಮರೆಡ್ಡಿ ತೋರಣತಿಪ್ಪಾ, ಶ್ರೀಧರಕುಮಾರ ಇಟಗಿ ಚಂಡ್ರಿಕಿ, ಶರಣಪ್ಪ ಕೋಲಕರ್, ಸೋಮನಗೌಡ ಬೆಳಗೇರಾ, ತಿಮ್ಮಣ್ಣ ಬಡಿಗೇರ, ಮರೆಪ್ಪ ಬೇಗಾರ್ ಯಲ್ಹೆರಿ, ಬನ್ನಯ್ಯ ಹಳಗೇರಾ ಮತ್ತು ಕಲ್ಪನಾ ಕೊಂಬಿನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts