More

    ಸಾಲೂರು ಮಠದಲ್ಲಿ ಭಕ್ತರಿಗೆ ಮುದ್ದೆ, ಉಪ್ಸಾರು

    ಹನೂರು: ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಶುಕ್ರವಾರ ಭಕ್ತರಿಗೆ ವಿಶೇಷವಾಗಿ ಮುದ್ದೆ ಹಾಗೂ ಉಪ್ಸಾರು ಸಂತರ್ಪಣೆ ಮಾಡಲಾಯಿತು.
    ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇಶದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಮಠಗಳು ಪ್ರಾಚೀನ ಕಾಲದಿಂದಲೂ ತನ್ನದೇಯಾದ ವೈಶಿಷ್ಟೃತೆ ಹೊಂದಿವೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಕಾಯಕ ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ಜಲಿಸಲು ಪ್ರಾರಂಭಿಸಿದವು. 20ನೇ ಶತಮಾನದಲ್ಲಿ ಕಾಯಕದ ಜತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲು ಹಾಕಿದವು. ಈ ದಿಸೆಯಲ್ಲಿ ನಾಡಿನಲ್ಲಿ ಕಾಯಕ, ದಾಸೋಹ ಹಾಗೂ ಶೈಕ್ಷಣಿಕ ಪರಂಪರೆಯಲ್ಲಿ ಶ್ರೀ ಸಾಲೂರು ಬೃಹನ್ಮಠವು ಒಂದಾಗಿದೆ. ನಿರಂತರವಾಗಿ ದಾಸೋಹ ನಡೆಸಿಕೊಂಡು ಬರಲಾಗುತ್ತಿದ್ದು, ಹಸಿವು ನೀಗಿಸುವ ಕಣಜವಾಗಿದೆ. ಈ ದಿಸೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷವಾಗಿ ಮುದ್ದೆ ಪ್ರಸಾದವನ್ನು ಭಕ್ತರಿಗೆ ಉಣ ಬಡಿಸಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts