More

    ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಇಲ್ಲ

    ಚಿತ್ತಾಪುರ: ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಬದಿ ಗಣೇಶ ಪ್ರತಿಷ್ಠಾಪಿಸುವದು ನಿಷೇಧಿಸಲಾಗಿದೆ. ಯಾರು ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಬಾರದು ಎಂದು ಸಿಪಿಐ ಕೃಷ್ಣಪ್ಪ ಕಲ್ಲದೇವರ ಹೇಳಿದರು.
    ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಗಣೇಶ ಹಬ್ಬ ಕುರಿತು ಶಾಂತಿ ಸಭೆಯಲ್ಲಿ ಮಾತನಾಡಿ, ಕರೊನಾ ನಿಯಂತ್ರಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಬೇಕು. ಮೆರವಣಿಗೆ ಮಾಡುವಂತಿಲ್ಲ. ಹಳ್ಳ, ಕೊಳ್ಳ, ನದಿಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ. ಮನೆ ಆವರಣದಲ್ಲಿ ವಿಸರ್ಜನೆ ಮಾಡಬೇಕು. ಸಕರ್ಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದರು.
    ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಮಣ್ಣಿನ ಗಣಪತಿ ವಿಗ್ರಹ ಸ್ಥಾಪಿಸಬೇಕು ಎಂದು ಹೇಳಿದರು.
    ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಮಾತನಾಡಿ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶನ ವಿಗ್ರಹ ವಿಸರ್ಜನೆ ಪುರಸಭೆ ಟ್ಯಾಕ್ಟರ್ ಮೂಲಕ ಮಾಡಲಾಗುವದು ಎಂದು ಮಾಹಿತಿ ನೀಡಿದರು. ಪಿಎಸ್ಐ ಶ್ರೀಶೈಲ ಅಂಬಾಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮಲ್ಲಿಕಾಜರ್ುನ ಪೂಜಾರಿ, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ವಿನೋದ ಗುತ್ತೇದಾರ, ರಾಮದಾಸ ಚವ್ಹಾಣ, ಕೊಟೇಶ್ವರ ರೇಷ್ಮಿ, ಮಲ್ಲಿಕಾಜರ್ುನ ಬೆಣ್ಣೂರ, ಪೋಲಿಸ್ ಸಿಬ್ಬಂದಿ ಪ್ರಶಾಂತ ಹೆರೂರ, ಆಜಾದ್, ಬಲವಂತರಡ್ಡಿ, ಮಲ್ಲೇಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts