More

    ಸಾರ್ವಜನಿಕ ಶೌಚಗೃಹ ಕಾಮಗಾರಿಗೆ ಚಾಲನೆ

    ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

    ಸ್ಥಳೀಯ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ತಾತ್ಕಾಲಿಕವಾಗಿ ತಾಡಪತ್ರಿಯಿಂದ ನಿರ್ವಿುಸಿದ್ದ ಅವ್ಯವಸ್ಥಿತ ಶೌಚಗೃಹದ ಪಕ್ಕದಲ್ಲೇ ಹೈಟೆಕ್ ಸಾರ್ವಜನಿಕ ಶೌಚಗೃಹ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ.ನಿಂದ ಶನಿವಾರ ಚಾಲನೆ ನೀಡಲಾಯಿತು.

    ಕಳೆದ 6 ತಿಂಗಳಿಂದ ಸಾರ್ವಜನಿಕ ಶೌಚಗೃಹ ಇರದ ಕಾರಣ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಜ. 3ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ‘ಪಟ್ಟಣದಲ್ಲಿಲ್ಲ ಸಾರ್ವಜನಿಕ ಶೌಚಗೃಹ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಲಾಗಿತ್ತು. ಇನ್ನು ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಹಲವು ಬಾರಿ ಒತ್ತಾಯಪಡಿಸುತ್ತ ಬಂದಿದ್ದರು. ಕಡೆಗೂ ಎಚ್ಚೆತ್ತ ಅಧಿಕಾರಿಗಳು ಶೌಚಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

    ಜ. 4ರಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಸ್ಥಳೀಯ ನಿವಾಸಿಗಳು ಸಹ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿಯಿಂದ ಜ. 5ರಂದು ಶೌಚಗೃಹ ನಿರ್ಮಾಣ ಕುರಿತು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿತ್ತು.

    ಸ್ವಚ್ಛಭಾರತ ಅಭಿಯಾನ ಯೋಜನೆಯಡಿ 3.60 ಲಕ್ಷ ರೂ. ಹಾಗೂ ಸಾರ್ವಜನಿಕ ವಂತಿಕೆಯಿಂದ 40 ಸಾವಿರ ರೂ. ಅನುದಾನದಲ್ಲಿ ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಒಳಗೊಂಡ ಶೌಚಗೃಹ ನಿರ್ಮಾಣ ಮಾಡಲಾಗುವುದು ಎಂದು ಪಿಡಿಒ ಪ್ರಕಾಶ ಸುಂಕಾಪುರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts