More

    ಸಾರ್ವಜನಿಕರೇ ಮೈ ಮರೆಯಬೇಡಿ

    ಶಿರಸಿ: ಕರೊನಾಕ್ಕೆ ಸಂಬಂಧಿಸಿದ ನಿಜವಾದ ಗಂಡಾಂತರ ಇನ್ನು ಮುಂದೆ ಎದುರಾಗಲಿದ್ದು, ಜನ ಮೈಮರೆಯಬಾರದು ಎಂದು ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

    ನಗರದ ಮಿನಿವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ನಿಗದಿಪಡಿಸಿದ ಸಮಯದಲ್ಲಿ ಸಾರ್ವಜನಿಕರು ಸಂಚರಿಸಬೇಕು. ಹಳ್ಳಿಗಳ ಜನತೆ ಪೇಟೆಗೆ ಬರಬಾರದು. ತೀರಾ ಅಗತ್ಯವಿದ್ದರೆ ಮಾತ್ರ ಬರಬೇಕು. ಇದೀಗ ಸಮಸ್ಯೆ ಎದುರಾಗುವ ಕಾಲಘಟ್ಟವಾಗಿದ್ದು, ಹೊರಗಡೆಯಿಂದ ಬಂದ ವ್ಯಕ್ತಿ ಹಾಗೂ ಆತನ ಕುಟುಂಬ 14 ದಿನ ಕ್ವಾರಂಟೈನ್​ನಲ್ಲಿ ಇರಬೇಕು. ಮುಂದಿನ 20-25 ದಿನ ಜಿಲ್ಲೆಯ ಜನತೆ ತುಂಬಾ ಜಾಗರೂಕರಾಗಿರಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಹೊರಗಡೆಯಿಂದ ಬಂದವರ ಮನೆಗೆ ರೆಡ್ ಸೀಲ್ ಹಾಕುತ್ತೇವೆ. ಎಲ್ಲ ಅಂಗಡಿಯವರನ್ನು ಕರೆದು ಸಭೆ ನಡೆಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ತರಕಾರಿ, ಹಣ್ಣು, ಮೀನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಕಟಿಂಗ್ ಶಾಪ್​ಗಳಲ್ಲಿ ಕೆಲಸ ಮಾಡುವವರು ಪದೇ ಪದೆ ಬಟ್ಟೆ ಬದಲಿಸಬೇಕು. ಒಂದೇ ಕುರ್ಚಿ ಹಾಕಿ ಕಟಿಂಗ್ ಮಾಡಬೇಕು. ಬಟ್ಟೆ, ಆಭರಣ ಅಂಗಡಿಯವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

    ಡಿವೈಎಸ್ಪಿ ಜಿ.ಟಿ. ನಾಯಕ ಮಾತನಾಡಿ, ಕರೊನಾ ಹರಡದಂತೆ ಕ್ರಮ ಕೈಗೊಳ್ಳಲು ಸರ್ಕಾರದ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಐದು ಜನ ಸೇರುವಂತಿಲ್ಲ. ಮಾಸ್ಕ್ ಹಾಕಿಕೊಳ್ಳಬೇಕು. ಉಪವಿಭಾಗದ ಎಲ್ಲಾ ಚೆಕ್​ಪೋಸ್ಟ್​ಗಳಲ್ಲಿ ಹೊರಗಿನಿಂದ ಬರುವವರು ನೋಂದಣಿ ಮಾಡಿಸಬೇಕು. ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ನೀಡದಿದ್ದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬೀಟ್ ಪೊಲೀಸರು ಹದ್ದಿನ ಕಣ್ಣಿಟ್ಟು ಪರಿಶೀಲಿಸಬೇಕು. ಪೊಲೀಸರ ಮಾರ್ಗದರ್ಶನದಲ್ಲಿ ಎಪಿಎಂಸಿಯಲ್ಲಿನ ಚಟುವಟಿಕೆ ನಡೆಸಬೇಕು. ಜಿಯೋ ಪೆನ್ಸಿಂಗ್ ಮೂಲಕ ಹೊರಗಿನಿಂದ ಬಂದವರನ್ನು ಗುರುತಿಸಲಾಗುವುದು. ಇನ್ನು ಮುಂದೆ ಬೈಕ್​ನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬೇಕು ಎಂದರು. ಈ ವೇಳೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts