More

    ಸಾರಿಗೆ ಬಸ್​ ಬಿದ್ದು 25 ಜನರಿಗೆ ಗಾಯ

    ಅಥಣಿ ಗ್ರಾಮೀಣ: ಬಸ್​ ಸ್ಟೇರಿಂಗ್​ ರಾಡ್​ ತುಂಡಾದ ಪರಿಣಾಮ ಸಾರಿಗೆ ಸಂಸ್ಥೆಯ ಬಸ್ಸೊಂದು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹಿರೇ ಹಳ್ಳದ ದಡದ ಗುಂಡಿಗೆ ಬಿದ್ದ ಪರಿಣಾಮ 25 ಪ್ರಯಾಣಿಕರಿಗೆ ಸಣ್ಣ&ಪುಟ್ಟ ಗಾಯಗಳಾದ ಟನೆ ಗುರುವಾರ ನಡೆದಿದೆ.

    ಅಥಣಿಯಿಂದ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್​ ಕೊಕಟನೂರ&ಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗುತ್ತಿದ್ದಾಗ ಸ್ಟೇರಿಂಗ್​ ರಾಡ್​ ತುಂಡಾಗಿ ರಸ್ತೆ ಪಕ್ಕದ ಗುಂಡಿಗೆ ಬಸ್​ ಬಿದ್ದಿದೆ. ಬಸ್​ ಗುಂಡಿಯಲ್ಲಿ ಉರುಳಿರುವುದನ್ನು ಕಂಡ ಅಕ್ಕ ಪಕ್ಕದ ಜನರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಅದರಲ್ಲಿದ್ದ ಬಸ್​ ಚಾಲಕ ಪರಮೇಶ್ವರ ಐಗಳಿ, ನಿರ್ವಾಹಕ ಜಗದೀಶ ಬಬಲೇಶ್ವರ ಸೇರಿ 25 ಜನ ಪ್ರಯಾಣಿಕರನ್ನು ಹೊರ ತೆಗೆದಿದ್ದಾರೆ.

    ಬಸ್​ನಲ್ಲಿದ್ದ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸಣ್ಣ&ಪುಟ್ಟ ಗಾಯಗಳಾಗಿದ್ದವರನ್ನು ಕೊಕಟನೂರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

    ತಡೆಗೋಡೆ ನಿರ್ಮಿಸಲು ಆಗ್ರಹ: ಕೊಕಟನೂರಿನ ಹಿರೇ ಹಳ್ಳದ ಪಕ್ಕದಲ್ಲಿರುವ ಗುಂಡಿಯ ಪ್ರದೇಶದಲ್ಲಿ ತಡೆ ಗೋಡೆ ಇಲ್ಲ. ಕಾರಣ, ಈ ಪ್ರದೇಶದಲ್ಲಿ ಇಂತಹ ಅವಡಗಳು ಸಂಭವಿಸಲು ಕಾರಣವಾಗಿದೆ. ಈ ಹಿಂದೆ ಅನೇಕ ದ್ವಿಚಕ್ರ ಸವಾರರಿ ಬಿದ್ದ ಕೈ&ಕಾಲು ಮುರಿಗು ಕೊಂಡರು ಅಧಿಕಾರಿಗಳು ಎಚ್ಚೆತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಕೊಕಟನೂರದಿಂದ ಯಲ್ಲಮ್ಮವಾಡಿವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡುವ ಜತೆಗೆ ಹಿರೇ ಹಳ್ಳದ ಸುತ್ತ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts