More

    ಸಾರಸ್ವತ ಲೋಕಕ್ಕೆ ಗಿರಿನಾಡಿನ ಸೇವೆ ಅಪಾರ


    ಯಾದಗಿರಿ: ಭಾಷೆ ಭಿನ್ನವಾದರೂ ಭಾವವೊಂದೆ, ಪ್ರಾಂತೀಯ ಸೋಂಕು ತಗುಲದಿರಲಿ, ಸಮಗ್ರ ನಾಡು ಸಮೃದ್ದಿಯಾಗಲಿ ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

    ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಗರದ ಪಂಪ ಮಹಾಕವಿ ಮಂಟಪದಲ್ಲಿ ಕರವೇ ಆಯೋಜಿಸಿದ್ದ ಗಿರಿನಾಡ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಗಿರಿನಾಡಿನ ಸಾಹಿತಿಗಳ ಸೇವೆ ಅಪಾರವಾಗಿದೆ. ಅವರು ರಚಿಸಿದ ಸಾಹಿತ್ಯ ನಮ್ಮನ್ನು ಇಂದಿಗೂ ನಡೆ-ನುಡಿ ಚೆನ್ನಾಗಿಟ್ಟುಕೊಂಡು ಜೀವಿಸುವಂತೆ ಮಾಡಿದೆ. ಅದೇರೀತಿ ಕರವೇ ಕನರ್ಾಟಕದಲ್ಲಿ ಯಾವುದೇ ರಿತಿಯ ವೈಷಮ್ಯಗಳಿಲ್ಲದೇ ಹೋರಾಟ ಮಾಡಿತ್ತಿರುವುದು ಶ್ಲಾಘನೀಯ ಎಂದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ನೆಲ,ಜಲ,ಭಾಷೆ ರಕ್ಷಣೆಗಾಗಿ ರಾಜ್ಯ ಸರಕಾರ ಬದ್ದವಾಗಿದೆ, ನಾವೆಲ್ಲರೂ ಸೇರಿ ಸುಭದ್ರ ನಾಡು ಕಟ್ಟೋಣ ಎಂದು ಹೇಳಿದರು.

    ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಗಡಿಭಾಗದ ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಶೇ.5ರಷ್ಟು ಸ್ಥಳೀಯ ಮೀಸಲಾತಿ ಸಿಗುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ. ನಮ್ಮ ನೆಲ,ಭಾಷೆ ಬಗ್ಗೆ ನಮಗೆ ಅಪರವಾದ ಗೌರವ ಇದೆ. ಅದೇ ರಿತಿ ನಮ್ಮ ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಕರವೇ ಸಂಘಟನೆಗೆ ಸದಾ ಬೆನ್ನೇಲುಬಾಗಿ ನಿಲ್ಲುತ್ತೇವೆ ಎಂದು ಅಭಯ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts