More

    ಸಾಯಿ ಶೂರ್ ರಾಗಿ ಹೆಲ್ತಮಿಕ್ಸ ವಿತರಣೆಗೆ ಡಿಸಿ ಜಾನಕಿ ಚಾಲನೆ

    ಬಾಗಲಕೋಟೆ: ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹು ಪೋಷಕಾಂಶಯುಕ್ತ ಸಾಯಿ ಶೂರ್ ರಾಗಿ ಹೆಲ್ತಮಿಕ್ಸ್ ವಿತರಣೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗುರುವಾರ ಚಾಲನೆ ನೀಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ನ ಟ್ರಸ್ಟ ಮತ್ತು ಕೆ.ಎಂ.ಎಪ್ ಸಂಸ್ಥೆ ಸಹಯೋಗದಲ್ಲಿ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಭಾಭವನದಲ್ಲಿ ಸಾಯಿ ಶೂರ್ ರಾಗಿ ಹೆಲ್ತಮಿಕ್ಸ್ ಪೌಡರನ್ನು ಹಾಲಿಗೆ ಬೆರಸಿ ತಾವು ಕುಡಿಯುವ ಮೂಲಕ ಮಕ್ಕಳಿಗೆ ಕುಡಿಸಿ, ಮಾತನಾಡಿದ ಅವರು ಮಕ್ಕಳ ಸಮತೋಲನ ಬೆಳೆವಣಿಗೆ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡುವದರ ಜೊತೆಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ತಿಳಿಸಿದರು.

    ರಾಗಿ ಕುಡಿದವನು ನಿರೋಗಿಯಾಗುತ್ತಾನೆ ಎಂಬ ನಾನ್ನುಡಿ ಹೇಳುವ ಮೂಲಕ ಸಿರಿಧಾನ್ಯಗಳ ಸಿರಿದಾನ್ಯಗಳ ಮಹತ್ವವನ್ನು ತಿಳಿಸಿದರು. ಸರಕಾರ ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ರಾಗಿ ಹೆಲ್ತಮಿಕ್ಸ್ ಉತ್ತಮ ಪೌಷ್ಠಿಕ ಆಹಾರವಾಗಿದೆ. ಇದನ್ನು ಬಿಸಿ ಹಾಲಿನಲ್ಲಿ ಬೆರಸಿ ಕುಡಿಯುವದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ಜಿಲ್ಲೆಯ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

    ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಸಾಯಿ ಶೂರ್ ರಾಗಿ ಹೆಲ್ತಮಿಕ್ಸ ಪೌಡರನ್ನು ಮುಖ್ಯಮಂತ್ರಿಗಳು ಇಂದು ರಾಜ್ಯಾದ್ಯಂತ ಚಾಲನೆ ನೀಡಿದ್ದಾರೆ. ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಲು ಹಾಗೂ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಮಾಡಲು ಈ ಯೋಜನೆ ಜಾರಿಗೆ ತರಲಾಗಿದೆ. ದೈಹಿಕ, ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ರಾಗಿ ಹೆಲ್ತಮಿಕ್ಸ ಪೌಡರ ಉಪಯುಕ್ತವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶ್ರೀಹರಿ ಟಿಕಾರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ರೇವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಕೇಶವ ಪಟ್ಲೂರ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಚಂದ್ರಕಲಾ ಗೊಮಟೆ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಗುಡೂರ, ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಅರಿಹಂತ ರಾಮತೀರ್ಥ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಗಿರಿಜಾ ನಡುವಿನಮನಿ, ಕೆ.ಎಂ.ಎಫ್‌ನ ಜಿಲ್ಲಾ ವ್ಯವಸ್ಥಾಪಕ ಯಡಹಳ್ಳಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts