More

    ಸಾಮೂಹಿಕ ವಿವಾಹ ಏ. 6ರಂದು

    ಧಾರವಾಡ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ವಾರ್ಷಿಕೋತ್ಸವ ನಿಮಿತ್ತ ನವಲೂರು ಗ್ರಾಮದ ಶ್ರೀ 1008 ಆದಿನಾಥ ದಿಗಂಬರ ಜೈನ ಟ್ರಸ್ಟ್ ಕಮಿಟಿ ವತಿಯಿಂದ ಏ. 6ರಂದು ಗ್ರಾಮದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಹಾವೀರ ಜೈನ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಸಮಾರಂಭದಲ್ಲಿ ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮುನಿಮಹಾರಾಜರು, ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಎಸ್​ಡಿಎಂ ಸಂಸ್ಥೆಯ ಪದ್ಮಲತಾ ನಿರಂಜನಕುಮಾರ ಇತರರು ಪಾಲ್ಗೊಳ್ಳಲಿದ್ದಾರೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಗ್ರಾಮದಲ್ಲಿನ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಾಹದಲ್ಲಿ ವಧುವಿಗೆ ತಾಳಿ, ಕಾಲುಂಗುರ, ಬಟ್ಟೆ ಹಾಗೂ ವರನಿಗೆ ಬಟ್ಟೆ ನೀಡಲಾಗುವುದು. ಆಸಕ್ತರು ನೋಂದಣಿಗೆ ಮಹಾವೀರ ನರೇಂದ್ರ (ಮೊ. 96634 84730), ಪಿ.ಎನ್. ಹನಸಿ (9343109663)ಅವರನ್ನು ಸಂರ್ಪಸಬಹುದು. ನೋಂದಣಿಗೆ ಮಾ. 25 ಕೊನೇ ದಿನವಾಗಿದೆ ಎಂದರು. ಮಹಾವೀರ ಶಿವಣ್ಣವರ, ಭೀಮಣ್ಣ ಹೊನಕೇರಿ, ಮಲ್ಲಪ್ಪ ನರೇಂದ್ರ, ಆನಂದ ಚಿವಟೆ, ರವಿ ಹನಸಿ, ನಿಂಗಪ್ಪ ಬಡಕುರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts