More

    ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ

    ಹಳಿಯಾಳ: ಯುವಸಮೂಹ ಶಿಕ್ಷಣದ ಜೊತೆ ಜೊತೆಗೆ ಶ್ರಮದಾನ, ಸ್ವಚ್ಛತಾ ಅಭಿಯಾನ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

    ತಾಲೂಕಿನ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಂಗಳವಾರ ಲ್ಯಾಪ್​ಟಾಪ್ ವಿತರಿಸಿ ಅವರು ಮಾತನಾಡಿದರು.

    ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ಮಸೂದೆಯನ್ನು ಕರ್ನಾಟಕದಲ್ಲಿ ನಾನು ಜಾರಿಗೊಳಿಸಿದೆ. ತನ್ಮೂಲಕ ಐಟಿ ಬಿಟಿ ಉದ್ಯಮಗಳಿಗೆ ಉದ್ಯೋಗಗಳಿಗೆ ವಿಪುಲ ಅವಕಾಶಗಳು ತೆರೆಯಲ್ಪಟ್ಟವು ಎಂದರು.

    ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸುವ ಯೋಜನೆ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಆರಂಭಗೊಂಡಿತು. ಈ ಯೋಜನೆಯಿಂದ ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ವಂಚಿತರಾಗುತ್ತಿರುವುದನ್ನು ತಪ್ಪಿಸಲು ಉದ್ಯಮಿ ಮಿತ್ರರ ಸಾಮಾಜಿಕ ನೆರವಿನ ಕಾರ್ಯಕ್ರಮದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಿನಲ್ಲಿ 2 ಸಾವಿರ ಲ್ಯಾಪ್​ಟಾಪ್ ವಿತರಿಸಲಾಗಿತ್ತು ಎಂದರು.

    ಪ್ರಾಚಾರ್ಯ ಡಾ.ಚಂದ್ರಶೇಖರ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಡಿ. ಗಂಗಾಧರ, ಮದನ ಬಿಡಿಕರ, ಅನಿಲ ಚವ್ಹಾಣ, ಅಬ್ದುಲಸಲಾಂ ದಲಾಲ, ಮಂಗಲಾ ಕಶೀಲಕರ, ಹನೋರಿಯಾ ಬೃಗಾಂಜಾ, ಕಾಲೀಜಿನ ವಿದ್ಯಾರ್ಥಿ ಪ್ರತಿನಿಧಿ ನಾಗು ದೊಯಿಪುಡೆ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಡಾ.ರೇಖಾ ಎಂ.ಆರ್, ಉಪನ್ಯಾಸಕಿ ಪರ್ವಿನ ಶೇಖ್, ಡಾ.ಮಾಲತಿ ಹಿರೇಮಠ ಉಪಸ್ಥಿತರಿದ್ದರು. ಉಪನ್ಯಾಸಕ ಪರಮಾನಂದ ದಾಸರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts