More

    ಸಾಮರ್ಥ್ಯ ಗುರುತಿಸುವ ಕೆಲಸವಾಗಲಿ

    ಬೆಳಗಾವಿ: ಭಾರತವು ವಿಶ್ವದಲ್ಲಿ 253 ಮಿಲಿಯನ್ ಪ್ರೌಢಾವಸ್ಥೆಯ ಜನಸಂಖ್ಯೆ ಹೊಂದಿದ್ದು, ಪ್ರತಿ ಐವರಲ್ಲಿ ಓರ್ವ ವ್ಯಕ್ತಿ 10ರಿಂದ 19 ವರ್ಷ ವಯಸ್ಸಿನವನಾಗಿದ್ದಾನೆ. ಪ್ರೌಢಾವಸ್ಥೆಯಲ್ಲಿ ಅವರ ಸಾಮರ್ಥ್ಯ ಗುರುತಿಸಿ ನಿರ್ದೇಶಿಸಿದರೆ ದೇಶಕ್ಕೆ ಲಾಭವಾಗಲಿದೆ ಎಂದು ಭಾರತೀಯ ಚಿಕ್ಕಮಕ್ಕಳ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಡಾ.ರೂಪಾ ಬೆಲ್ಲದ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಈಚೆಗೆ ಆಯೋಜಿಸಿದ್ದ ‘ದಿ ಅಡೋಲೆಸೆಂಟ್ ಹೆಲ್ತ್ ಅಕಾಡೆಮಿ ಆಫ್ ಇಂಡಿಯನ್, ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಉದ್ಘಾಟಿಸಿ ಅವರು ಮಾತನಾಡಿದರು. ಮಗುವಿನಿಂದ ಪ್ರೌಢಾವಸ್ಥೆಯ ಕಾಲಘಟ್ಟದ ಪರಿವರ್ತನೆಯು ನಿರ್ಣಾಯಕ ಹಂತ. ಆದ್ದರಿಂದ ಪ್ರತಿ ಹಂತದಲ್ಲಿಯೂ ಅವರನ್ನು ಸಬಲೀಕರಣಗೊಳಿಸಿ, ಅತ್ಯುತ್ತಮ ಮತ್ತು ಆದರ್ಶವಾಗಿಸುವುದು ಅತಿ ಮುಖ್ಯ ಎಂದರು. ಸಂಘದ ಕಾರ್ಯದರ್ಶಿ ಡಾ.ಮನೀಶಾ ಭಂಡಾರಕರ್, ಐಎಪಿ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ಸಲಗರೆ ಮಾತನಾಡಿದರು. ಅಂತಾರಾಷ್ಟ್ರೀಯ ಪ್ರೌಢಾವಸ್ಥೆಯ ಆರೋಗ್ಯ ಸಪ್ತಾಹದ ಸಂಯೋಜಕಿ ಡಾ.ಪ್ರೀತಿ ಗಲಗಲಿ, ತನಿಷ್ಕಾ ಸಂಜಯ, ಡಾ.ಕಸ್ತೂರಿ ಡೊನ್ನಿಮಠ, ಜೆಎನ್‌ಎಂಸಿ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಭಾವನಾ ಕೊಪ್ಪದ, ಮಕ್ಕಳ ಮತ್ತು ಸ್ತ್ರೀರೋಗ ತಜ್ಞ ಡಾ.ಸೋನಾಲಿ ಬಿಜ್ಜರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts