More

    ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ

    ಯಾದಗಿರಿ: ಸರಕಾರಿ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ಅವಧಿಯಲ್ಲಿ ಸಾಧ್ಯವಾದಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸಬೇಕು ಎಂದು ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಪತಿ ಸಲಹೆ ಮಾಡಿದರು.
    ಇಲ್ಲಿನ ಕೆಇಬಿ ಸಭಾ ಭವನದಲ್ಲಿ ನೌಕರರ ಜಿಲ್ಲಾ ಸಂಘದಿಂದ ಆಯೋಜಿಸಿದ್ದ ವಿದ್ಯುತ್ ಸುರಕ್ಷತಾ ಕಾರ್ಯಗಾರ ಸಂಘಟನಾ ಸಭೆ ಹಾಗು ವಯೋನಿವೃತ್ತಿ ಹೊಂದಿದ ಅಧಿಕಾರಿ ಶ್ರೀನಿವಾಸರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಅಧಿಕಾರಿಗಳಿಗೆ ಹುದ್ದೆ ಶಾಶ್ವತವಲ್ಲ. ಆದರೆ, ಆ ಅವಧಿಯಲ್ಲಿ ನಾವು ಪ್ರಾಮಾಣಿಕ, ನಿಷ್ಠೆಯಿಂದ ಮಾಡುವ ಸೇವೆ ಜನಮಾನಸದಲ್ಲಿ ಸದಾ ನೆನಪಿರುತ್ತದೆ. ಯಾವುದೇ ನಾಯಕ ಬೆಳೆಯಲು ಆತನದಲ್ಲಿ ನಾಯಕತ್ವದ ಗುಣಗಳಿರುವುದು ಅವಶ್ಯವಾಗಿದೆ ಎಂದರು.

    ನಿಗಮದ ನೌಕರರ ವೇತನ ಪರಿಷ್ಕೃರಣೆ ಮಾಡುವಂತೆ ಸಕರ್ಾರಕ್ಕೆ ಸಂಘದಿಂದ ಸಾಕಷ್ಟು ಬಾರಿ ಒತ್ತಡ ಹೇರಲಾಗುತ್ತಿದೆ. ಸಧ್ಯ ನಮ್ಮ ಸಂಘ ಬಲಿಷ್ಠವಾಗಿದೆ ಹಿಡಿದ ಕೆಲಸ ಮಾಡಿಯೇ ತೀರುತ್ತೇವೆ. ವಿದ್ಯುತ್ ಕ್ಷೇತ್ರ ಅತ್ಯಂತ ಸಮಸ್ಯೆಯಿಂದ ಕೂಡಿದೆ. ಬದಲಾದ ಸಂಸ್ಕರಣೆ ಮೂಲಕ ವಿದ್ಯುತ್ ಮೇಲೆ ಜನತೆ ಹೆಚ್ಚು ಅವಲಂಬನೆಯಾಗಿದ್ದಾರೆ. ಆದರೂ ನಾವು ಎದೆಗುಂದದೆ ಇಲಾಖೆ ಕೆಲಸ ಮಾಡುತ್ತಿದ್ದೇವೆ. ಸಾಕಷ್ಟು ಸಿಬ್ಬಂದಿ ವಿದ್ಯುತ್ ಅವಘಡದಿಂದ ಸಾವನ್ನಪ್ಪುತ್ತಾರೆ. ಶಾಶ್ವತ ವಿಕಲಾಂಗರಾಗುತ್ತಾರೆ. ಆದರೂ ಸಾರ್ವಜನಿಕ ಕೆಲಸ ಬಿಟ್ಟು ಹೋಗಿಲ್ಲ ಎಂದು ಸಿಬ್ಬಂದಿಯ ಕಾರ್ಯ ಕ್ಷಮತೆಯನ್ನು ಕೊಂಡಾಡಿದರು.

    ವಿದ್ಯುತ್ ಕಾಯ್ದೆಯ ಖಾಸಗೀಕರಣ ಸೇರಿ ಹಲವು ಸಮಸ್ಯೆಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗಿ, ಸಿದ್ದರಾಗಬೇಕು. ಅಂದಾಗ ಮಾತ್ರ ಸಕರ್ಾರ ನಮ್ಮ ಕಡೆ ಗಮನ ಕೊಡುತ್ತದೆ. ಯಾವುದೇ ಗುರಿ ಸಾಧಿಸಬೇಕಾದರೆ ಮೊದಲು ನಮ್ಮಲ್ಲಿ ಒಗ್ಗಟ್ಟಿರಬೇಕು ಎಂದು ಕಿವಿಮಾತು ಹೇಳಿದರು.

    ಸಂಘದ ಉಪಾಧ್ಯಕ್ಷ ಬಾಬು ಕೊರೆ ಮಾತನಾಡಿ, ಸಂಘಟನೆಯ ಮೂಲಕ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ವಯೋನಿವೃತ್ತಿ ಹೊಂದಿದ ಸಂಘದ ಕಾರ್ಯಧ್ಯಕ್ಷ ಶ್ರೀನಿವಾಸ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ತಮ್ಮದೇಯಾದ ಛಾಪು ಮೂಡಿಸಿದ್ದಾರೆ ಎಂದು ಕೊಂಡಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts