More

    ಸಾಧನೆ ಮತ್ತೊಬ್ಬರಿಗೆ ಪ್ರೇರಣೆ ಆಗಲಿ


    ಯಾದಗಿರಿ: ಪೋಷಕರಿಗೆ ಒಳ್ಳೆಯ ಹೆಸರು ತರುವ ಛಲ ನಿಮ್ಮಲ್ಲಿರಲಿ, ನಿಮ್ಮ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.


    ಮಂಗಳವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಂದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ನಾಡಿಗೆ ಒಳ್ಳೆಯ ಪ್ರಜೆಗಳಾಗಿ ದೇಶ ಕಟ್ಟುವುದಕ್ಕೆ ತಾವೆಲ್ಲರೂ ಕೈ ಜೋಡಿಸುವಂಥ ಸಾಧನೆ ಮಾಡಬೇಕು. ಯಾದಗಿರಿಯನ್ನು ಹಿಂದುಳಿದ ಜಿಲ್ಲೆ ಎಂದು ಹೇಳುತ್ತಾರೆ. ಆದರೆ ಇಂಥ ಪ್ರತಿಭಾವಂತ ವಿದ್ಯಾಥರ್ಿಗಳು ಇರುವಾಗ ಜಿಲ್ಲೆ ಹಿಂದುಳಿಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ನೀವೆಲ್ಲರೂ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೇರಲು ನಿಮ್ಮದೆಯಾದ ಕೊಡುಗೆ ನೀಡುವಂತೆ ಪ್ರೇರಣೆ ನೀಡಿದರು.

    ನೀವು ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಲು ನಿಮಗೆ ಹಕ್ಕು ಇದೆ. ಗುರಿ ಸಾಧನೆಗೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮವು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವೈಯಕ್ತಿಕ ಸಾಧನೆ ಮತ್ತು ರಾಷ್ಟ್ರದ ಬೆಳವಣಿಗೆ ಅತ್ಯಂತ ಪೂರಕವಾಗಿದೆ ಎಂದರು. ಜಿಲ್ಲಾಕಾರಿ ನುಡಿದರು.

    ಜಿಪಂ ಸಿಇಒ ಗರೀಮಾ ಪನ್ವಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಜೀವನದ ಪ್ರಮುಖ ಘಟ್ಟವಾಗಿದೆ. ಮಾಜಿ ರಾಷ್ಟಪತಿ ಅಬ್ದುಲ್ ಕಲಾಂರು ಹೇಳುವಂತೆ ನಿದ್ದೆಯಲ್ಲಿ ಕಾಣುವ ಕನಸು ಕನಸಲ್ಲ, ನಿದ್ದೆಯನ್ನೇ ಕೆಡಿಸುವ ಕನಸೇ ಕನಸಾಗಿದ್ದು, ನಿಮ್ಮ ಕನಸು ದೊಡ್ಡದಾಗಿರಬೇಕು. ಹೆಚ್ಚು ಪರಿಶ್ರಮ, ಶಿಸ್ತು, ಸಮಯಪಾಲನೆ ಕೂಡ ಅಷ್ಟೇ ಮುಖ್ಯವಾಗಿದೆ. ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನೀವು ಹುಡುಕಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
    ಡಿಡಿಪಿಐ ಸುರೇಶ ಹುಗ್ಗಿ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಕ್ಷೇತ್ರ ಶಿಕ್ಷಣಾಕಾರಿಗಳಾದ ಅಮೃತಾಬಾಯಿ ಜಾಗೀರದಾರ, ಪಂಡಿತ್ ನಿಂಬೂರ,ಬಸಣ್ಣಗೌಡ ಆಲ್ದಾಳ, ಹಣಮಂತ , ಎಚ್.ಹಣಮಂತ, ಸುದರ್ಶನರೆಡ್ಡಿ, ಎಚ್. ಸೋಮಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts