More

    ಸಾಧನೆಗೆ ಬೇಕು ಕಠಿಣ ಪರಿಶ್ರಮ

    ಬಸವಕಲ್ಯಾಣ: ನಗರದ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ರಾಜೇಶ್ವರ ಗ್ರಾಮದ ಶ್ವೇತಾ ಹಿರೇಮಠ ಅವರು ಪಿಎಸ್ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಹಿನ್ನೆಲೆ ಅವರಿಗೆ ಕಾಲೇಜಿನಲ್ಲಿ ಗುರುವಾರ ಸನ್ಮಾನಿಸಲಾಯಿತು.
    ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ಪರಿಶ್ರಮ ಮತ್ತು ಸ್ಪಧಾತ್ಮಕ ಮನೋಭಾವದಿಂದ ಜೀವನದಲ್ಲಿ ಮಹತ್ವದ ಸಾಧನೆ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಶ್ವೇತಾ ಹಿರೇಮಠ ಸಾಕ್ಷಿಯಾಗಿದ್ದಾರೆ ಎಂದರು.
    ಸನ್ಮಾನ ಸ್ವೀಕರಿಸಿದ ಶ್ವೇತಾ ಹಿರೇಮಠ ಮಾತನಾಡಿ, ಸಾಧಿಸುವ ಗುರಿ ಮತ್ತು ಇದಕ್ಕೆ ಪೂರಕವಾಗಿ ಪರಿಶ್ರಮ ಇದ್ದಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪಿಎಸ್ಐ ಪರೀಕ್ಷೆಯಲ್ಲಿ ಸಾಧನೆ ಮಾಡಲು ಶಾಲಾ-ಕಾಲೇಜಿನಲ್ಲಿಯ ಗುರುಗಳು ಮತ್ತು ತಂದೆ-ತಾಯಿಯ ಮಾರ್ಗದರ್ಶನ ಪ್ರೇರಣೆಯಾಗಿದೆ ಎಂದರು.
    ತಡೋಳಾ ಗುರುಕುಲದ ಮುಖ್ಯಗುರು ಓಂಕಾರ ಮಠಪತಿ, ಕಿತ್ತೂರ ರಾಣಿ ಚನ್ನಮ್ಮ ಪ್ರೌಢ ಶಾಲೆ ಮುಖ್ಯಗುರು ನರೇಂದ್ರ ಹಿರೇಮಠ, ಶಿಕ್ಷಕ ಶಶಿಕಾಂತ ಮಂಠಾಳೆ ಮಾತನಾಡಿದರು. ಇರ್ಫಾನ್ ಪಟೇಲ್, ಸಂಜು ಪಾಟೀಲ್, ವರ್ಷಾ ಪಾಟೀಲ್, ಮಾಲಾಶ್ರೀ, ತ್ರಿಲೋಚನ ಪಂಚಾಳ, ಸಾರಿಕಾ ಜೋಶಿ, ಸಂಜು ದೂಧನಕರ್, ಶಿವಾನಂದ ಸ್ವಾಮಿ, ಮೌನೇಶ್ವರ ಕುಂಬಾರ ಗೋವಿಂದ ಹುಲಗುತ್ತೆ ಉಪಸ್ಥಿತರಿದ್ದರು. ವಿಶಾಲ ಗಾಯಕವಾಡ ಸ್ವಾಗತಿಸಿದರು. ಬಲಭೀಮ ಪಾಟೀಲ್ ವಂದಿಸಿದರು. ನಿವೇದಿತಾ ಅಲಶೆಟ್ಟೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts