More

    ಸಾಧನೆಗೆ ಬಡವ- ಶ್ರೀಮಂತ ಎಂಬ ತಾರತಮ್ಯವಿಲ್ಲ: ಡಾ. ಕಲ್ಲೇಶ್ವರ ಸ್ವಾಮಿ

    ಹೊಳೆಹೊನ್ನೂರು: ಮಕ್ಕಳು ಜ್ಞಾನ ಮತ್ತು ಸಂವಹನ ಕೌಶಲ ಬೆಳೆಸಿಕೊಳ್ಳುತ್ತಾ ಸಮಾಜಕ್ಕಾಗಿ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದು ಶಿವಮೊಗ್ಗದ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕಲ್ಲೇಶ್ವರ ಸ್ವಾಮಿ ಹೇಳಿದರು. ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ 24ನೇ ಜ್ಞಾನದೀಪ ಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ, ಕಲಾ ಮತ್ತು ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಅಹಂಕಾರ ಬಿಟ್ಟು ಆಸಕ್ತಿಯಿಂದ, ಶಿಸ್ತಿನಿಂದ ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳೆಸಿಕೊಂಡು ಅಧ್ಯಯನ ಶೀಲರಾದರೆ ಅಂದುಕೊಂಡದ್ದನ್ನು ಸಾಧಿಸಬಹುದು, ಕಲಿಕೆಯಲ್ಲಿ ಪ್ರಗತಿ ಕಾಣಬಹುದು. ಸಾಧನೆಗೆ ಬಡವ- ಶ್ರೀಮಂತ ಎಂಬ ತಾರತಮ್ಯವಿಲ್ಲ ಎಂದರು. ಪ್ರಾಚಾರ್ಯ ಶ್ರೀಕಾಂತ ಎಂ. ಹೆಗ್ಡೆ ಮಾತನಾಡಿ, ಮಕ್ಕಳು ವಿದ್ಯಾರ್ಥಿಜೀವನದಲ್ಲಿ ವಯೋಮಟ್ಟಕ್ಕನುಸರಿಸಿ ಆಸಕ್ತಿದಾಯಕವಾಗಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಭಾಷೆ, ಸಮಾಜ ವಿಜ್ಞಾನ, ಗಣಿತ, ಕೃಷಿ, ಬೀದಿ ನಾಟಕ, ವಿಜ್ಞಾನ, ಕಲೆಗೆ ಸಂಬಂಧಿಸಿದ ಸುಮಾರು 500 ಕ್ಕೂ ಹೆಚ್ಚು ಪ್ರಯೋಗ ಮತ್ತು ವಸ್ತುಪ್ರದರ್ಶನಗಳನ್ನು ಮಕ್ಕಳು ಪ್ರದರ್ಶಿಸಿದರು. ಶಿವಮೊಗ್ಗ, ಚನ್ನಗಿರಿ ಹಾಗೂ ಭದ್ರಾವತಿಯ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts