More

    ಸಾಧಕರೇ ಸಾಧನೆಗೆ ಪ್ರೇರಣೆ

    ನರೇಗಲ್ಲ: ಅಂಗವಿಕಲತೆ ಶಾಪವಲ್ಲವೆಂದರಿತ ಹಲವಾರು ಜನ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅಂಥವರನ್ನು ಪ್ರೇರಣೆಯಾಗಿಸಿಕೊಂಡು ಸಾಧನೆ ಮಾಡಬೇಕು ಎಂದು ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಚಂದ್ರಾಮ ಗ್ರಾಮಪುರೋಹಿತ ಹೇಳಿದರು.

    ಪಟ್ಟಣದ ಹಿರೇಮಠದ ಸಭಾ ಭವನದಲ್ಲಿ ಸ್ಥಳೀಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗದಗನ ದೀನ ಬಂಧು ಸ್ವಯಂ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂಗವಿಕಲರಿಗೆ ಸ್ವಯಂ ಉದ್ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ‘ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲಕ ಅಂಗವಿಕಲರು ಎಲ್ಲರಂತೆ ಜೀವನ ಸಾಗಿಸುವಂತಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದರು.

    ದೀನಬಂಧು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಹರ್ಷಾ ಪಾಳೇಕರ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅಂಗವಿಕಲರು ದೀನಬಂಧು ಸಂಸ್ಥೆ ನೀಡುತ್ತಿರುವ 10 ಸಾವಿರ ರೂ.ಗಳ ಸಹಾಯ ಧನ ಹಾಗೂ ಒಂದು ವಾರದ ಉಚಿತ ತರಬೇತಿ ಪಡೆದು ಮನೆಯಲ್ಲೇ ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.

    ಗವಿಸಿದ್ದಪ್ಪ ಗೊಡಚಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ನಿರ್ಮಲಾ ಹಿರೇಮಠ, ಪ.ಪಂ. ಸಿಬ್ಬಂದಿ ಎಸ್.ಎ. ಜಕ್ಕಲಿ. ಆದರ್ಶ ಕುಲಕರ್ಣಿ, ನಿರ್ಮಲಾ ಕಡೇತೋಟದ, ವೀರಯ್ಯ ಸಂಶಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts