More

    ಸಾಗುವಳಿ ಸಕ್ರಮ ಅರ್ಜಿಗಳ ಗಣಕೀಕರಣ; ಮೇ 1ರಿಂದ ಜುಲೈ 31ರವರೆಗೆ ಕಾಲಮಿತಿ ನಿಗದಿ

    ಬೆಂಗಳೂರು: ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಸಕ್ರಮದ ಅರ್ಜಿಗಳ ಗಣಕೀಕರಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ನಮೂನೆ 57 ಅರ್ಜಿಗಳನ್ನು ತಂತ್ರಾಂಶದಲ್ಲಿ ಕಾಲೋಚಿತಗೊಳಿಸಲು (ಅಪ್ ಲೋಡ್) ಮೇ 1ರಿಂದ ಜುಲೈ 31ರವರೆಗೆ ಕಾಲಮಿತಿ ನಿಗದಿಪಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಈ ಕುರಿತು ಕಂದಾಯ ಇಲಾಖೆ ನಿರ್ದೇಶನ ನೀಡಿದೆ.

    ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕಾಗಿ ಭೂಕಂದಾಯ ಕಾಯ್ದೆ 1964ರ ಕಲಂ 94-ಎ(4)ಗೆ ತಿದ್ದುಪಡಿ ಮಾಡಲಾಗಿದೆ. ಭೂ ಕಂದಾಯ ನಿಯಮಗಳು, 1966ರ ನಿಯಮ 108ಸಿಸಿಸಿಯನ್ನು ಸೇರಿಸಿ ಹೊಸದಾಗಿ ನಮೂನೆ 57ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಸರ್ಕಾರ ಸಮ್ಮತಿಸಿದ್ದು, 2018 ಮಾರ್ಚ್ 17ರಿಂದ 2019ರ ಮಾರ್ಚ್ 16ರವರೆಗೆ ಕಾಲಾವಕಾಶ ನೀಡಿತ್ತು. ಸ್ವೀಕೃತ ಅರ್ಜಿಗಳು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವ ಪ್ರಕ್ರಿಯೆ ನಡೆದಿತ್ತು. ಇದೇ ವೇಳೆ ಸಾರ್ವತ್ರಿಕ ಲೋಕಸಭೆ ಚುನಾವಣೆ ಘೊಷಣೆಯಾಗಿದ್ದರಿಂದ ಈ ಕೆಲಸ ಅಪೂರ್ಣವಾಗಿದೆ.

    ಬಾಕಿ ಅರ್ಜಿಗಳು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ಒಟ್ಟು 8,57,640 ಅರ್ಜಿಗಳು ಸ್ವೀಕಾರವಾಗಿದ್ದವು. ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಣೆಗೆ ಮುನ್ನ 3,74,087 ಅರ್ಜಿಗಳ ಗಣಕೀಕರಣವಾಗಿದ್ದು, ಬಾಕಿ 4,83,553 ಅರ್ಜಿಗಳು ತಂತ್ರಾಂಶದಲ್ಲಿ ಅಪ್ ಲೋಡ್ ಆಗಬೇಕಾಗಿದೆ. ತುಮಕೂರು ಜಿಲ್ಲೆ ಯಿಂದ ಗರಿಷ್ಠ 94,584 ಅರ್ಜಿಗಳು ಸ್ವೀಕಾರವಾಗಿದ್ದರೆ, 43,938 ಅರ್ಜಿಗಳ ಗಣಕೀಕರಣ ಬಾಕಿಯಿದೆ. ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ 24 ಅರ್ಜಿಗಳು ಸ್ವೀಕೃತವಾಗಿವೆ.

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಮಂತ್ರಾಲಯ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ಇನ್ನಿಲ್ಲ; ಎಸ್‌.ಎನ್. ಸುಯಮೀಂದ್ರಾಚಾರ್‌ ಕೋವಿಡ್‌ಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts