More

    ಸಾಗರದ ತಾಯಿಮಗು ಆಸ್ಪತ್ರೆಯ ಹಾಸಿಗೆ ಮೇಲ್ದರ್ಜೆಗೆ; ಕಾಮಗಾರಿಗೆ ಶಾಸಕ ಹರತಾಳು ಹಾಲಪ್ಪ ಶಿಲಾನ್ಯಾಸ

    ಸಾಗರ: ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಕೊಟ್ಟರೆ ಜನರು ಆರೋಗ್ಯಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವುದು ನಿಲ್ಲುತ್ತದೆ. ಗುಣಮಟ್ಟದ ಆಸ್ಪತ್ರೆ ನಿರ್ಮಿಸುವುದು ನಮ್ಮ ಪ್ರಮುಖ ಆದ್ಯತೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ನಗರದ ತಾಯಿಮಗು ಆಸ್ಪತ್ರೆಯನ್ನು 60 ಹಾಸಿಗೆಯಿಂದ 100 ಹಾಸಿಗೆಗೆ ಮೇಲ್ದರ್ಜೆಗೇರಿಸುವ 4 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಆಸ್ಪತ್ರೆಗೆ ಹೋಗಲು ಸುಸಜ್ಜಿತವಾದ ರಸ್ತೆಯನ್ನು ಎಲ್ಲ ಕಡೆ ನಿರ್ಮಿಸಲಾಗುತ್ತಿದೆ. 100 ಕಿಮೀಗೆ ಒಂದು ಮೆಡಿಕಲ್ ಕಾಲೇಜು ಇರಬೇಕು ಎನ್ನುವ ನಿಯಮವಿದೆ. ಶಿವಮೊಗ್ಗ ಕೇಂದ್ರದಿಂದ ಸಾಗರ ಅಂದಾಜು 100 ಕಿಮೀ ದೂರವಿದೆ. ಸಾಗರಕ್ಕೊಂದು ಮೆಡಿಕಲ್ ಕಾಲೇಜು ಅಗತ್ಯವಿದೆ. ಈ ಬಗ್ಗೆ ಜಾಗ ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮೆಡಿಕಲ್ ಕಾಲೇಜು, ಸುಸಜ್ಜಿತ ಆಸ್ಪತ್ರೆ ಎಲ್ಲವನ್ನೂ ಒಂದೆ ಕಡೆ ತರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದರು.
    ಹಾಲಿ ಇರುವ ತಾಯಿಮಗು ಆಸ್ಪತ್ರೆಯಲ್ಲಿ ಪ್ರತಿದಿನ 300ಕ್ಕೂ ಹೆಚ್ಚು ಹೆರಿಗೆ ಆಗುತ್ತಿದೆ. ಸಾಗರ ತಾಲೂಕು ಮಾತ್ರವಲ್ಲದೆ ಅಕ್ಕಪಕ್ಕದ ತಾಲೂಕು, ಜಿಲ್ಲೆಗಳಿಂದ ಸಹ ಇಲ್ಲಿ ಸಿಗುವ ಉತ್ತಮ ಆರೋಗ್ಯ ಸೇವೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಕಟ್ಟಡ ಕೊರತೆ ಹಿನ್ನೆಲೆಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts