More

    ಸಾಂಸ್ಕøತಿಕ ಲೋಕದಲ್ಲಿ ಸಾಗರಕ್ಕೆ ವಿಶೇಷ ಸ್ಥಾನ

    ಸಾಗರ: ಕಲೆ, ಸಾಹಿತ್ಯ, ಸಂಸ್ಕøತಿ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಸಾಗರ ತನ್ನದೇ ಆದ ಕೊಡುಗೆ ನೀಡಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    11ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಗಣೇಶ್ ಅವರಿಗೆ ಅ„ಕೃತ ಆಹ್ವಾನ ನೀಡಿ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕøತಿ ಇರುವ ಕಡೆ ಸಾಮರಸ್ಯ ಇರುತ್ತದೆ. ಎಲ್ಲರನ್ನೂ ತನ್ನೊಟ್ಟಿಗೆ ಕೊಂಡೊಯ್ಯುವ ಸಾಹಿತ್ಯ ಸೌಹಾರ್ದತೆಯನ್ನು ಪ್ರತಿಷ್ಠಾಪಿಸುತ್ತದೆ. ಅತಿ ಹೆಚ್ಚು ಜನರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಗರಲ್ಲಿ ಏರ್ಪಡಿಸಿರುವ 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ವಿ.ಗಣೇಶ್ ಆಯ್ಕೆಯಾಗಿದ್ದಾರೆ. ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ ಎಂದರು.
    ಬಿ.ಆರ್.ಜಯಂತ್ ಮಾತನಾಡಿ, ಸಾಗರಕ್ಕೆ ಸಾಹಿತ್ಯಿಕವಾಗಿ ಭದ್ರ ನೆಲೆಗಟ್ಟಿದೆ. ಸಾಹಿತ್ಯ ಓದಿನ ಜತೆಗೆ ಅದನ್ನು ಬದುಕಿನಲ್ಲಿ, ನಡೆವಳಿಕೆಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಾಹಿತ್ಯ ಸಾಂಗತ್ಯವಿದ್ದರೆ ಸಮಾಜ ಸನ್ಮಾರ್ಗದಲ್ಲಿ ಸಾಗುತ್ತದೆ. ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಗಣೇಶ್ ಅವರ ಮೇಲೂ ಚಂದ್ರಶೇಖರ ಕಂಬಾರರು, ಗೋವಿಂದರಾವ್, ಗೋಪಾಲಕೃಷ್ಣ ಅಡಿಗರ ಪ್ರಭಾವ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಗಣೇಶ್ ಅವರ ಕೊಡುಗೆ ಅಪಾರ ಎಂದರು.
    ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಡಿ.ತುಕಾರಾಮ್, ಬಿ.ಎಚ್.ಲಿಂಗರಾಜ್, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಪ್ರಮುಖರಾದ ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ಸಂತೋಷ್ ಶೇಟ್, ತಿಮ್ಮಪ್ಪ ಕಲಸೆ, ಡಾ. ಕೆಳದಿ ಗುಂಡಾ ಜೋಯಿಸ್, ಶರಾವತಿ ಸಿ. ರಾವ್, ಜಿ.ನಾಗೇಶ್, ಲೋಕೇಶ್ ಕುಮಾರ್, ನಾರಾಯಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts