More

    ಸಹಕಾರಿ ಸಂಘಗಳು ರೈತರ ಅವಿಭಾಜ್ಯ ಅಂಗ

    ಯಲ್ಲಾಪುರ: ಸಹಕಾರಿ ಸಂಘಗಳು ರೈತರ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಅದರಿಂದ ರೈತರನ್ನು ಪಾರು ಮಾಡುವ ವಿಚಾರದಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಎಲ್​ಎಸ್​ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಹೇಳಿದರು.

    ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಗುರುವಾರ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರ ಸಮುದ್ರವಿದ್ದಂತೆ. ಅದರಲ್ಲಿ ಅರಿತುಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ. ಆ ದೃಷ್ಟಿಯಿಂದ ಇಂತಹ ತರಬೇತಿ ಅಗತ್ಯ ಎಂದರು.

    ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಲಗಾರರು ಸಹಕಾರಿ ಸಂಘಗಳು ಬೆಳೆಯುವಲ್ಲಿ ಪ್ರಮುಖ ಕಾರಣ. ಜನರು ಸಹಕಾರಿ ಸಂಘಗಳ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟಿದ್ದು, ಅದನ್ನು ಉಳಿಸಿಕೊಂಡು ಹೋಗಲು ಅಗತ್ಯ ಪ್ರಯತ್ನ, ಚಿಂತನೆ ಸಹಕಾರಿ ವಲಯದಲ್ಲಿ ಆಗಬೇಕು ಎಂದರು.

    ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಂಎಸ್ ನಿರ್ದೇಶಕ ನರಸಿಂಹ ಕೋಣೆಮನೆ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುಬ್ರಾಯ ದಾನ್ಯಾನ ಕೊಪ್ಪ, ಮಧು ಭಟ್ಟ, ಎಸ್.ಎಸ್. ಬಿಜ್ಜೂರ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ. ರಾಮಪ್ಪ, ಡಿ.ಎಸ್. ಹೆಗಡೆ ಇದ್ದರು. ಆಶಾ ಭಟ್ಟ, ಟಿಎಂಎಸ್ ಮುಖ್ಯಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ, ಸಹಕಾರ ಯೂನಿಯನ್​ನ ಮುಖ್ಯಕಾರ್ಯನಿರ್ವಾಹಕ ಹಾಲಪ್ಪ ಕೋಡಿಹಳ್ಳಿ ನಿರ್ವಹಿಸಿದರು. ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts